ADVERTISEMENT

ಪ್ರಜಾವಾಣಿ ‘ನಾಡದೇವಿಗೆ ಗೀತ ನಮನ’ ವಿಜೇತರು

ಪ್ರಜಾವಾಣಿ ವಿಶೇಷ
Published 20 ನವೆಂಬರ್ 2021, 10:28 IST
Last Updated 20 ನವೆಂಬರ್ 2021, 10:28 IST
   

ಬೆಂಗಳೂರು: ಪ್ರಜಾವಾಣಿಯ 'ನಾಡ ದೇವಿಗೆ ಗೀತ ನಮನ' ಕಾರ್ಯಕ್ರಮದ ಅಂಗವಾಗಿ ‘ಕನ್ನಡ ಹಾಡಿನ ವಿಡಿಯೊ ಕಳುಹಿಸಿ ಬಹುಮಾನ ಗೆಲ್ಲಿ’ ಎಂಬ ಕರೆಗೆ ಕನ್ನಡಿಗರು ಭಾರಿ ಸಂಖ್ಯೆಯಲ್ಲಿ ಸ್ಪಂದಿಸಿದ್ದು, ಅವರಲ್ಲಿ 10 ಮಂದಿ ಬಹುಮಾನ ವಿಜೇತರಾಗಿದ್ದಾರೆ.

ಕನ್ನಡವನ್ನು ಉತ್ತೇಜಿಸುವ ಯುವಜನರ ಪ್ರಯತ್ನಗಳಿಗೆ ಪ್ರಜಾವಾಣಿ ವೇದಿಕೆ ಕಲ್ಪಿಸಿದ್ದು, ಬಹುಮಾನಿತರು ಹಾಡಿದ ಹಾಡು ಮತ್ತು ಗಾಯಕರ ಹೆಸರು ಈ ಕೆಳಗಿದೆ

ನಯನ ಮನೋಹರ - ಕೀರ್ತನಾ
ಹಚ್ಚೇವು ಕನ್ನಡ ದೀಪ - ಇಂದಿರಾ
ಕನ್ನಡವೆಂದರೆ - ಸುಶ್ಮಿತಾ
ಪೂಜಿಸಲೆಂದೇ - ನಿಧಿ ಸುಬ್ರಹ್ಮಣ್ಯ, ಕೆನಡಾ
ಕನ್ನಡ ನಾಡಿನ - ಲಾವಣ್ಯ ಗೋಪಾಲ್, ಅಮೆರಿಕಾ
ಜೋಗದ ಸಿರಿ - ದೀಪ್ತಿ ಭಟ್
ಜನ್ಮ ನೀಡುತ್ತಾಳೆ - ವಿಷ್ಣು
ಕರ್ನಾಟಕ ಬರೀ ನಾಡಲ್ಲ - ನಾದಶ್ರೀ
ಕನ್ನಡಮ್ಮನ ದೇವಾಲಯ - ಮರಿಯಪ್ಪ ಭಜಂತ್ರಿ
ಜೀವವಿಂದು ಏನೋ ಒಂದು - ರಶ್ಮಿ ಮಲ್ಲೇಸರ

ADVERTISEMENT

ಶ್ರೀನಿವಾಸ ಜಿ.ಕಪ್ಪಣ್ಣ ಅವರ ಸಹಕಾರದೊಂದಿಗೆ ಆಯ್ಕೆ ಮಾಡಲಾಗಿರುವ ಗೀತೆಗಳನ್ನು ಸಂಧ್ಯಾ ಭಟ್ ಅವರ ನಿರೂಪಣೆಯೊಂದಿಗೆ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ( http://Fb.com/Prajavani.net ) ಶನಿವಾರ ಸಂಜೆ 6 ಗಂಟೆಗೆ ಪ್ರೀಮಿಯರ್ ಶೋ ಮೂಲಕ ಪ್ರಸಾರ ಮಾಡಲಾಗುತ್ತದೆ.

ತೀರ್ಪುಗಾರರಾಗಿ, ಮಾಲತಿ ಶರ್ಮ (ಹಿರಿಯ ಗಾಯಕಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ), ಬಿ. ವಿ. ಶ್ರೀನಿವಾಸ್ (ಖ್ಯಾತ ಸಂಗೀತ ನಿರ್ದೇಶಕ ಮತ್ತು ಸಂಗೀತ ಸಂಯೋಜಕರು), ಡಾ. ರೋಹಿಣಿ ಮೋಹನ್ (ಹಿರಿಯ ಗಾಯಕಿ ಹಾಗೂ ಪ್ರವಚನಕಾರರು) ಸಹಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.