ಧಾವಂತ ಬದುಕು ನಡೆಸುತ್ತಿರುವ ನಗರದ ಜನತೆಗೆ ಡ್ರಮ್ ಈವೆಂಟ್ಸ್ ಇಂಡಿಯಾ, ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅಗತ್ಯ ಎನಿಸುವ ‘ವಿರಾಮ’ಕ್ಕೆ ವೇದಿಕೆ ಸಜ್ಜು ಮಾಡಿದೆ. ಸೊನಿಕ್ ಸೊಲೇಸ್ 5.0 ಎಂಬ ಪೂರ್ಣ ದಿನದ ಹೀಲಿಂಗ್ ಕಾರ್ಯಾಗಾರ ನಡೆಸಲಿದ್ದು, ಇದು ಪ್ರಶಾಂತತೆ ಮತ್ತು ನವೋತ್ಸಾಹ ತುಂಬಲಿದೆ.
ಆಗಸ್ಟ್ 31ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬೆಂಗಳೂರಿನ ಕನಕಪುರ ರಸ್ತೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.
‘ನಾದದ ಅಲೆಗಳ ಮೂಲಕ ನಿಮ್ಮಲ್ಲಿಯೇ ಪ್ರಶಾಂತತೆ ಕಂಡುಕೊಳ್ಳಿ’ ಎಂಬ ವಿಷಯದ ಅಡಿಯಲ್ಲಿ ಮನಸ್ಸನ್ನು ತಲ್ಲೀನಗೊಳಿಸಲಿದೆ. ಈ ಅನುಭವವು ಮನಸ್ಸು, ದೇಹ ಮತ್ತು ಆತ್ಮವನ್ನು ಪ್ರಶಾಂತತೆಗೆ ಕೊಂಡೊಯ್ಯುತ್ತದೆ.
ಸೌಂಡ್ ಹೀಲರ್‌ದ ಡಾ.ಶಾಮ್ ರಾಕ್, ಶಿಲ್ಪಿ ದಾಸ್, ಜಸ್ಟಿನ್ ಶೊನ್, ಜೀಥ್ ಮತ್ತು ಫೇಸ್ ಯೋಗ ಪರಿಣತೆ ಮೀನಾಕ್ಷಿ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ.
ಒತ್ತಡ ಕಡಿಮೆ ಮಾಡಿಕೊಳ್ಳಲು, ಭಾವನಾತ್ಮಕ ಸಮತೋಲನ, ರೋಗ ನಿರೋಧಕ ಶಕ್ತಿಯ ಉತ್ತೇಜನದಂಥ ಪ್ರಯೋಜನಗಳನ್ನು ಪಡೆಯಲು ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
ನೂರು ಮಂದಿ ಅಭ್ಯರ್ಥಿಗಳಿಗೆ ಸೀಮಿತವಾದ ಈ ವಿಶೇಷ ಕಾರ್ಯಾಗಾರವು ವಿಶ್ವದಿಂದ ಸಂಪರ್ಕ ಕಡಿತಗೊಳ್ಳಲು ಮತ್ತು ತಮ್ಮೊಂದಿಗೆ ಮರು ಸಂಪರ್ಕ ಸಾಧಿಸಲು ವಿಶಿಷ್ಟ ಅವಕಾಶ ನೀಡುತ್ತದೆ. ವೆಲ್ಕಂ ಡ್ರಿಂಗ್, ಪೌಷ್ಟಿಕಯುಕ್ತ ಭೋಜನ ಮತ್ತು ಸಮಾರೋಪಕ್ಕೆ ಕೋಕೋ ಸಮಾರಂಭವಿರುತ್ತದೆ.
ಶನಿವಾರ, ಆಗಸ್ಟ್ 31,
ಸಮಯ: ಬೆಳಿಗ್ಗೆ 10ರಿಂದ ಸಂಜೆ 5
ಸ್ಥಳ: ಬ್ಯಾಂಕ್ವೆಟ್ ಹಾಲ್, ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಬೆಂಗಳೂರು, ಕೋಣನಕುಂಟೆ
ಟಿಕೆಟ್ ಬೆಲೆ: ಪ್ರತಿ ವ್ಯಕ್ತಿಗೆ ₹ 2500
ವಯಸ್ಸು: 10 ವರ್ಷಗಳು ಮತ್ತು ಮೇಲ್ಪಟ್ಟು
ಭಾಗವಹಿಸಿದವರು ಅವರದೇ ಯೋಗ ಮ್ಯಾಟ್ ಮತ್ತು ಹೊದಿಕೆಗೆ ಶಾಲು ತರಬೇಕು. ಕಣ್ಣಿನ ಮಾಸ್ಕ್ ನೀಡಲಾಗುತ್ತದೆ.
ಟಿಕೆಟ್ ಅನ್ನು ಬುಕ್ ಮೈಶೋದಲ್ಲಿ ಕಾಯ್ದಿರಿಸಿ: https://in.bookmyshow.com/events/sonic-solace-sound-healing-session/ET00408018
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.