ADVERTISEMENT

ಸಂಗೀತದ ಆರಾಧನೆಗೆ ವೇದಿಕೆ ಸಜ್ಜು

ಇಂದಿನಿಂದ ರಾಮಸೇವಾ ಮಂಡಳಿಯ ರಾಮನವಮಿ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 20:00 IST
Last Updated 5 ಏಪ್ರಿಲ್ 2019, 20:00 IST
ನಗರದ ಕೋಟೆ ಶಾಲೆಯ ಮೈದಾನದಲ್ಲಿ ಶುಕ್ರವಾರ ರಾಮಸೇವಾ ಮಂಡಳಿಯ ಸಂಗೀತೋತ್ಸವಕ್ಕಾಗಿ ಶಾಮಿಯಾನ ಹಾಕುವ ಕೆಲಸ ನಡೆಯುತ್ತಿದೆ –ಪ್ರಜಾವಾಣಿ ಚಿತ್ರPhoto/ANAND BAKSHI
ನಗರದ ಕೋಟೆ ಶಾಲೆಯ ಮೈದಾನದಲ್ಲಿ ಶುಕ್ರವಾರ ರಾಮಸೇವಾ ಮಂಡಳಿಯ ಸಂಗೀತೋತ್ಸವಕ್ಕಾಗಿ ಶಾಮಿಯಾನ ಹಾಕುವ ಕೆಲಸ ನಡೆಯುತ್ತಿದೆ –ಪ್ರಜಾವಾಣಿ ಚಿತ್ರPhoto/ANAND BAKSHI   

ಯುಗಾದಿ ಹಬ್ಬಕ್ಕೆ ಸರಿಯಾಗಿ ಆರಂಭವಾಗುವ ರಾಮಸೇವಾ ಮಂಡಳಿಯ ಜಾಗತಿಕ ಸಂಗೀತೋತ್ಸವಕ್ಕೆ ಒಂದು ತಿಂಗಳಿನಿಂದ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್‌ ಆವರಣದಲ್ಲಿ ಅದ್ದೂರಿ ವೇದಿಕೆ ಸಜ್ಜುಗೊಳಿಸಲಾಗಿದೆ.

ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಐಎಎಸ್‌ ಅಧಿಕಾರಿಗಳಾದ ವಿಜಯ್‌ ಭಾಸ್ಕರ್‌, ಉಮಾಶಂಕರ್‌ ಉಪಸ್ಥಿತರಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್‌ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.45ಕ್ಕೆ ಉದ್ಘಾಟನೆ ಕಾರ್ಯಕ್ರಮ ಆಯೋಜನೆಗೊಂಡಿದೆ.

ಸ್ಮರಣ ಸಂಚಿಕೆಯನ್ನು ಉಮಾಶಂಕರ್‌ ಅವರು ಬಿಡುಗಡೆ ಮಾಡಿದರೆ, ಕಾಫಿ ಟೇಬಲ್‌ ಬುಕ್‌ ಅನ್ನು ಡಾ.ಸಿ.ಎಸ್‌.ಕೇದಾರ್‌ ಅವರು ಬಿಡುಗಡೆ ಮಾಡಲಿದ್ದಾರೆ.

ADVERTISEMENT

81 ವರ್ಷದ ಇತಿಹಾಸ ಇರುವ ಈ ಉತ್ಸವದಲ್ಲಿ ನೂರಾರು ಗಾನಕೋಗಿಲೆಗಳು ಹಾಡುವ ಮೂಲಕ ರಂಗು ಹೆಚ್ಚಿಸಲಿದ್ದಾರೆ. ಉದ್ಘಾಟನೆಯ ಸಂದರ್ಭದಲ್ಲಿಬಾಂಬೆ ಜಯಶ್ರೀ ರಾಮನಾಥ್‌ ಅವರಿಗೆ ‘ರಾಮಗಾನ ಕಲಾಚಾರ್ಯ’ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತದೆ. ಸಂಜೆ 6.45ಕ್ಕೆ ಅವರು ಗಾಯನ ಸಂಜೆ ನಡೆಸಿಕೊಡಲಿದ್ದಾರೆ.ಎಚ್‌.ಎನ್‌. ಭಾಸ್ಕರ್‌, ಡೆಲ್ಲಿ ಸಾಯಿರಾಂ, ಬಿ.ಎಸ್‌. ಪುರುಷೋತ್ತಮ್‌ ಅವರು ವಾದ್ಯ ಸಹಕಾರ ನೀಡಲಿದ್ದಾರೆ.

ಭಾನುವಾರ ಸಂಜೆ 4ಕ್ಕೆ ಬಾಲು ಮಾಸ್ತೆ ತಂಡದಿಂದ ವೀಣಾ ವಾದನ, ಸಂಜೆ 6.15ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ–ರಂಜನಿ ಮತ್ತು ಗಾಯತ್ರಿ ಅವರಿಂದ. ಸಂಗೀತೋತ್ಸವ ಜಾಗತಿಕ ಮಟ್ಟದಲ್ಲಿ ನಡೆಯಲಿರುವ ಕಾರಣ live.ramanavami.org ಜಾಲತಾಣದಲ್ಲಿ ವಿಶ್ವದ 150 ರಾಷ್ಟ್ರಗಳಿಗೆ ಲೈವ್ ಸಿಗಲಿದೆ. ಸಾಕಷ್ಟು ಕಾರ್ಯಕ್ರಮಗಳ ಫೇಸ್‌ಬುಕ್‌ ಲೈವ್ ಸಹ ಇರುತ್ತದೆ.

ಟಿಕೆಟ್‌ ಖರೀದಿ ಹೇಗೆ?

ಮಂಡಳಿಯ ವೆಬ್‌ ಪೋರ್ಟಲ್‌ www.ramanavamitickets.com ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. 31 ದಿನಗಳ ಸೀಸನ್‌ ಟಿಕೆಟ್‌ಗೆ ₹300ರಿಂದ ₹500ರ ವರೆಗೆ ಬೆಲೆ ನಿಗದಿ ಮಾಡಲಾಗಿದೆ. ಸಂಗೀತೋತ್ಸವಕ್ಕೆ ‘ಪ್ರಜಾವಾಣಿ’ ಮಾಧ್ಯಮ ಸಹಭಾಗಿತ್ವ ನೀಡಲಿದೆ. ಮಾಹಿತಿಗೆ: 080– 2660 4031, 94480 79079

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.