ಸುಳು ಸುಳು ಸುಳು ಸುಳು ಸುಳಿಯುವ ಗಾಳಿಯ
ಸವಾರಿ ಮಾಡಿ ನೀ ಬರಲು
ಗಡ ಗಡ ಗಡ ಗಡ ನಡುಗಿತು ಜನತೆಯು
ಎಲ್ಲೆಡೆ ಚಳಿಯು ಬಿದ್ದಿರಲು
ಚುಮು ಚುಮು ಚುಮು ಚುಮು ಹೊರಡಲು ಹೊತ್ತು
ಏಳಲು ಬೇಸರ ಥಂಡಿಯಲಿ
ಗುರು ಗುರು ಗುರು ಗುರು ನಿದ್ದೆ ಬರುವುದು
ಬೆಚ್ಚಗೆ ಮಲಗಲು ಮನೆಯಲ್ಲಿ
ಗಳ ಗಳ ಗಳ ಗಳ ಒಣಗಿತು ಪೈರು
ಚಳಿಯ ಗಾಳಿಗೆ ಮಾಗಿರಲು
ನಿಗಿ ನಿಗಿ ನಿಗಿ ನಿಗಿ ಕಿಚ್ಚಲಿ ಸುಟ್ಟ
ಬೆಳೆಸಿ ಸಿಗುವುದು ಹೊಲದಲ್ಲಿ
ಪರ ಪರ ಪರ ಪರ ತುರಿಕೆ ಮೈಯಲಿ
ಚಳಿರಾಯನಿಗೆ ಒಡೆದಿರಲು
ಸುಡು ಸುಡು ಸುಡು ಸುಡು ನೀರಿನ ಸ್ನಾನ
ಹಿತಕರ ಎಣ್ಣೆ ಹಚ್ಚಿರಲು
ಸರ ಸರ ಸರ ಸರ ಓದಲು ಕುಳಿತರೆ
ನಿದ್ದೆಯು ಬರುವುದು ಮನೆಯಲ್ಲಿ
ಪಟ ಪಟ ಪಟ ಪಟ ಪ್ರಶ್ನೆ ಕೇಳಲು
ಉತ್ತರ ಬಾರದು ಶಾಲೆಯಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.