ಬೆಳಕಿನಲ್ಲೂ ಕತ್ತಲಿರುವುದೆಂದು
ಕೆಲವರು
ನೋವನುಂಡು ನಲುಗಿದವರು
ನೊಂದು ನುಡಿವರು
ತಂಗಿ, ಕತ್ತಲಲ್ಲಿ ಬೆಳಕ
ಹಚ್ಚಲಾರೆವೇ?
ಬೆಳಕು ಹೊದೆಸಿ ಕತ್ತಲನ್ನು
ಮುಚ್ಚಲಾರೆವೇ?
ಕತ್ತಲಲ್ಲಿ ಸೃಷ್ಟಿ ಕನಸು
ಕಾಣುತಿರುವುದು
ಬೆಳಕಿನಲ್ಲಿ ಅದರ ಭಾಗ್ಯ
ಬೆಳೆಯುತಿರುವುದು
ಕತ್ತಲೆಂದು ಅಳುಕಬಹುದೆ?
ನಡೆಯಬೇಕಿದೆ
ನಮ್ಮೊಳಗಿನ ಬೆಳಕನ್ನೇ
ಪಡೆಯಬೇಕಿದೆ
ಜೊತೆಗಿರುವವು ಮಿಡಿವ ಹೃದಯ
ಒಲಿದ ಕರಗಳು
ಕತ್ತಲಾದರೇನು ಭಯ?
ಹೆಜ್ಜೆ ಇಡುವೆವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.