ADVERTISEMENT

ಅಭಿಷೇಕ ಬಳೆ ಮಸರಕಲ್ ಅವರ ಕವನ: ಎದೆ ಬೀದಿಯ ಸಾಲುಗಳು....

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನಕ್ಷತ್ರಗಳ ತುಂಬು
ಸಂಸಾರದಲ್ಲಿ ಚಂದ್ರ
ಅನಾಥ ಮಗು 

ಒಲವ ಕುಡಿಸಿದರು
ಹೃದಯದ ಬಿಕ್ಕಳಿಕೆ
ನಿಂತಿಲ್ಲ, ಬಹುಷಃ
ವಿರಹ ಕಾಡಿರಬೇಕು

ADVERTISEMENT

ಈಗೀಗ ನಾನು 
ಕವಿತೆಗಳೊಂದಿಗೆ ಜೀವಿಸುತ್ತಿದ್ದೇನೆ
ನೀನು ದುಃಖಿಸುವ ಅವಶ್ಯಕತೆಯಿಲ್ಲ

ನಿನ್ನ ನೆನಪುಗಳು ಹೂವಿನಷ್ಟು 
ಹಗುರವಿರಬಾರದಿತ್ತೆ
ಎದೆ ಭಾರವಾಗುವುದು
ತಪ್ಪುತ್ತಿತ್ತು

ನಿನ್ನ ಉಸಿರು ತಾಕಿದ ಗಾಳಿ 
ನನ್ನ ಮನೆ ಮುಂದೆ ಹಾದು ಹೋಗಲಿ
ಅದರ
ಸ್ವಾಗತಕ್ಕೆಂದೆ ನಾನು ಹೀಗೆ ಕಾದು ಕುಳಿತಿರುವೆ


ನಿನ್ನ ದಾರಿಗೆ ಬೆಳಕ ಚೆಲ್ಲಿದ್ದೇನೆ
ಈಗ
ಕತ್ತಲಿನ ಭಯವಿಲ್ಲ
ನನಗೆ

ನಿನ್ನ ನೆನಪಿನ
ಬೆಳಕಲಿ ಕಳೆದುಕೊಂಡ 
ಖುಷಿಯ
ಹುಡುಕುತ್ತಿದ್ದೇನೆ

ನೀನು
ಬಿಟ್ಟು ಹೋಗಿದ್ದು
ಎದೆ ತುಂಬ ನೋವು
ತುಟಿ ಮೇಲೆ ಮೌನ

ಎಷ್ಟು ತಾರೆಗಳು ಒಂದು ಮುಗಿಲಿಗೆ
ಅದೆಷ್ಟು ನೋವು ಒಮ್ಮೆ ಸೋತ ಪ್ರೀತಿಗೆ

ಗಾಳಿ ಬರೀ
ಬೀಸಿದರೆ ಪರವಾಗಿಲ್ಲ
ನಿನ್ನ ನೆನಪು
ಹೊತ್ತು ತರದಿದ್ದರೆ
ಸಾಕು

ಸಂಪೂರ್ಣ ಮರೆತು ಬಿಡಬೇಕು 
ಎಂದಾಗಲೆಲ್ಲ
ನೆನಪುಗಳು
ಎದೆ ಬೀದಿಗಿಳಿದು
ಪ್ರತಿಭಟನೆಗೆ ನಿಲ್ಲುತ್ತವೆ....

ಬಿದ್ದ ಹೂಗಳನ್ನು
ಆಯಬಲ್ಲೆ ನೀನು
ಒಡೆದು ಬಿದ್ದ ಹೃದಯದ
ಪಕಳೆಗಳ 


ಚಳಿಗಾಲದ ಸಂಜೆ
ವಿರಹದ  'ಕಿಡಿ'ಗಳು
ಧಗ್ಗನೆ ಹೊತ್ತಿಕೊಳ್ಳುತ್ತವೆ
ನಾನು
ಕವಿತೆ
ಬರೆದು ತಣ್ಣಗಾಗುತ್ತೇನೆ

ಅವಳಿಲ್ಲದ ದಿನ
ಗುರುತಾದಾಗ
ನನ್ನ ಸಾವಾಗಲಿ


ನಿನ್ನ ಹೆಸರಲ್ಲಿದ್ದ ಬೆಳದಿಂಗಳು 
ಹಾಳಾದ ಹುಡುಗನ ಬದುಕಿಗೆ ಬರಲಿಲ್ಲ
ಒಲವ ಬೆಳದಿಂಗಳು ಬದುಕಲಿ 
ಹಾದು 
ಹೋಗಿದ್ದರೆ
ಬದುಕು ದೀಪಾವಳಿ ಆಗುತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.