ADVERTISEMENT

ಕವನ | ವೀರಣ್ಣ ಮಂಠಾಳಕರ್ ಅವರ ಗಜಲ್

ಪ್ರಜಾವಾಣಿ ವಿಶೇಷ
Published 28 ಏಪ್ರಿಲ್ 2024, 0:26 IST
Last Updated 28 ಏಪ್ರಿಲ್ 2024, 0:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಗೆಟ್ಟಿ ಚಿತ್ರ

ಸಾವಿನ ಮನೆಯಲ್ಲೂ ಶರಬತ್ ಕುಡಿಯುವವರಿದ್ದಾರೆ

ADVERTISEMENT

ಶರಾಬಿನಲ್ಲಿ ವಿಷ ಬೆರೆಸಿ ಹರಟುತ್ತಾ ಕುಡಿಯುವರಿದ್ದಾರೆ

ಶರಾಬಿಗೂ ಸಾವಿಗೂ ಮೊಹಬ್ಬತ್ತಿನ ನಂಟು ಬೆಸೆಯುವರಿದ್ದಾರೆ

ಜಗದಲ್ಲಿ ಯಾರೇನೆ ಇದ್ದರೂ ಕ್ಯಾರೆ ಎನ್ನುತ್ತಾ ಕುಡಿಯುವರಿದ್ದಾರೆ

ಕುಡಿತಕ್ಕೂ ಶರಾಬಿಗೂ ಫರಕ್ಕಿಷ್ಟೇ ಸಾವಿನ ಮನೆ

ನಿರ್ಮಿಸುವರಿದ್ದಾರೆ

ಮಹಲಗಳನ್ನು ಕಟ್ಟಿದ್ದವರು ಸ್ಮಶಾನ ಸೇರುವರು

ಕುಡಿಯುವರಿದ್ದಾರೆ

ಕುಡಿಯುವರಿಲ್ಲದ ಜಾಗವೇ ಇಲ್ಲ ಜಗದ ಮೂಲೆ ಮೂಲೆಗೂ

ಶರಾಬು

ಕುಡಿಯುವವರನ್ನ ದೂರುವರ ಸುತ್ತಮುತ್ತ

ಕುಡಿಯುವವರಿದ್ದಾರೆ

ಕುಡಿಯುವರೊಂದಿಗೆ ಕರಾರು ಮಾಡಿಕೊಂಡಿದೆ ಸರ್ಕಾರದ

ಬೊಕ್ಕಸಕ್ಕಾಗಿ

ಖಾಲಿತನವನ್ನು ಕಳೆಯಲು ಹೋದವರ ಸುತ್ತ

ಕುಡಿಯುವವರಿದ್ದಾರೆ

‘ವೀರ’ ನೀ ಕುಡಿದರೂ ಖಾಲಿ ಖಾಲಿತನದ ಖಯಾಲುಗಳಿವೆ ನಿನಗೆ

ಮರೆತು ಬಿಡು ಒಮ್ಮೆ ನಶೆಯ ಪಯಣದಲ್ಲಿ ಕುಡಿಯುವರಿದ್ದಾರೆ

ನಶೆಯ ದಾರಿಯಲ್ಲ ಇಲ್ಲಿ ನಂಬಿಕೆ ವಿಶ್ವಾಸಘಾತುಕರೇ

ಹೆಚ್ಚಾಗಿರುವರು

ಹುಚ್ಚು ಹಿಡಿಯಬೇಕು ನೀ ಗಜಲ್ ಬರೆಯುವಾಗ ಕುಡಿಯುವರಿದ್ದಾರೆ

ಕುಡಿಯುವವರಿದ್ದಾರೆ ಜಗದಲ್ಲಿ ತೂರಾಡುತ್ತಲೇ ಜರಿಯುವರಿದ್ದಾರೆ

ನಿನ್ನ ಡಜನ್ ಗಜಲ್ ನಶೆಯೇರಿಕೊಂಡು ಸದಾ ಕುಡಿಯುವರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.