ಆನೆ ಅಣ್ಣ ಬಂದ
ಆಲೆ ಮನೆಗ್ ಹೋದ
ಒಂಟೆ ಅಕ್ಕ ಬಂದ್ಳು
ಓಯಸಿಸ್ ಎಲ್ಲಿ ಅಂದ್ಳು
ಕುದ್ರೆ ಮಾಮ ಕೆನೆದ
ರೇಸುಗ್ ಬರ್ತ್ಯ ಕೇಳ್ದ
ಕತ್ತೆ ಮಾಮಿ ಕಿರ್ಚುದ್ಳು
ಕಾಲೆತ್ ಒದೀಲ ಕೇಳುದ್ಳು
ಹುಲಿರಾಯ ಹಾರ್ದ
ಸೀದಾ ಗುಹೆ ಸೇರ್ದ
ಸಿಂಹ ರಾಜ ಗುಡುಗ್ದ
ಕಾಡು ಗಡ ಗಡ ನಡುಗ್ತು
ಜಿಂಕೆ ಜೋಡಿ ಓಡ್ತು
ಮಿಂಚು ಹೊಳ್ದಂಗಾಯ್ತು
ಕಪ್ಪೆ ಪಾಪು ವಟಗುಟ್ತು
ನೀರಲ್ ಮುಳ್ಗಿ ಏಳ್ತು
ಹಕ್ಕಿ ಹಿಂಡು ಹಾರ್ತು
ಸಂಜೆಗೆಂಪು ಮೂಡ್ತು
ಮಕ್ಕಳ ಆಟ ಮುಗೀತು
ಮನೆಕಡೆ ಓಟ ಕಿತ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.