ಒಳ್ಳೆಯವರೇ
ಆಗಿದ್ದರು
ಇತ್ತೀಚಿನವರೆಗೂ
ಸಕ್ಕರೆ ಹಾಲು ಕಾಫಿಪುಡಿ ಕಡ ಕೇಳುತ್ತಾ
ಕೊಡುತ್ತಾ ಹರಟುತ್ತಾ ಕಷ್ಟಸುಖ ಹಂಚಿಕೊಳ್ಳುತ್ತಾ
ಮಕ್ಕಳ ಶಾಲೆ ಕೆಲಸ ಮದುವೆ ಇತ್ಯಾದಿಗಳಲ್ಲಿ
ಇದ್ದೇ ಇದ್ದೇವೆ ಪರಸ್ಪರರ ಫೋಟೋಗಳಲ್ಲಿ
ಎಡಿಟ್ ಮಾಡಲಾಗದಂತೆ ಅಪ್ಪಿ ನಿಂತ ಭಂಗಿಗಳಲ್ಲಿ
ಸುನಾಮಿ ಬರುವ ಸೂಚನೆಯೇ ಇರಲಿಲ್ಲ
ಬಂತು ಎಲ್ಲ ಉರುಳಿಸುತ್ತಾ ಕಬಳಿಸುತ್ತಾ
ಅದು ಹೇಗೋ ನಡುವೆ ಬಂದು ಬಿತ್ತು ದೊಡ್ಡ ಗುಪ್ಪೆ
ಗಟ್ಟಿಗೊಂಡು ಗೋಡೆಯಾಗಿ ಕಾಣದಂತೆ ಆಚೀಚೆ
ನಡುವಿನ ಆಟದ ಮೈದಾನ ರಕ್ತಸಿಕ್ತ
ಆಚೆ ಈಚೆ ಕೊಳು ಕೊಡುಗೆ ನಿಂತು ಸದ್ದಿಲ್ಲ, ಮೌನ.
ಒಂದು ದಿನ ಅಕ್ಕಿಕಾಳು ಕೊಡಲು ಬಂದವರು ಹೇಳಿದರು
ಪಕ್ಕದಲ್ಲಿ ಮನೆಯಿಲ್ಲ. ಆಚೆ ಏನೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.