ADVERTISEMENT

ರೇಣುಕಾ ನಿಡಗುಂದಿ ಅವರ ಅನುವಾದಿತ ಕವನ: 47ನೇ ಇಸ್ವಿ ನೆನೆಯುತ್ತ..

ಕವಿ : ಕೇದಾರನಾಥ ಸಿಂಗ್ ಅನು:  ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿ
Published 6 ಜುಲೈ 2024, 20:59 IST
Last Updated 6 ಜುಲೈ 2024, 20:59 IST
   

ನಿನಗೆ ನೂರ್ ಮಿಂಯಾನ ನೆನೆಪಿದೆಯೇ ಕೇದಾರನಾಥ ಸಿಂಗ್ ?

ಗೋದುಬಣ್ಣದ ನೂರ್ ಮಿಂಯಾ
ಕುಳ್ಳಗಿನ ನೂರ್ ಮಿಂಯಾ

ರಾಮಗಢ ಸಂತೆಯಲ್ಲಿ ಸುರಮಾ ಮಾರಿ
ಎಲ್ಲರಿಗಿಂತ ತಡವಾಗಿ ಮರಳುವ ನೂರ್ ಮಿಂಯಾ

ADVERTISEMENT

ನಿನಗೆ ತುಸುವಾದರೂ ನೆನಪಿದೆಯಾ ಕೇದಾರನಾಥ ಸಿಂಗ್?
ನೆನಪಿದೆಯಾ ಮದರಸಾ
ಹುಣಿಸೆಮರ
ಇಮಾಮರ ಚಾಳು

ನಿನಗೆ ನೆನಪಿದೆಯಾ 
ಶುರುವಿಂದ ಕೊನೆತನಕ
ಹತ್ತೊಂಭತ್ತರ ಮಗ್ಗಿ

ನಿನ್ನ ಮರೆತುಹೋದ ಪಾಟಿಯಲ್ಲಿ
ಕೂಡಿಸಿ ಕಳೆದು
ಇದ್ದಕ್ಕಿದ್ದಂತೆ ಒಂದಿನ ನಿನ್ನ ಓಣಿಯನ್ನು ತೊರೆದು
ನೂರ್ ಮಿಂಯಾ ಏಕೆ ಹೋದರೆಂದು
ಹೇಳಬಲ್ಲೆಯಾ?

ನಿನಗೆ ಗೊತ್ತೇ
ಈಗವರು ಎಲ್ಲಿದ್ದಾರೆಂದು
ಢಾಕಾ ಅಥವಾ 
ಮುಲ್ತಾನ್ ದಲ್ಲಾ ?

ಪಾಕಿಸ್ತಾನದಲ್ಲಿ ಪ್ರತಿವರ್ಷ ಎಷ್ಟು ಎಲೆಗಳುದುರುತ್ತವೆಂದು
ಹೇಳಬಲ್ಲೆಯಾ ನೀನು?
ಯಾಕೆ ಮೌನವಾಗಿರುವಿ ಕೇದಾರನಾಥ ಸಿಂಗ್?
ಲೆಕ್ಕ ಬರುವುದಿಲ್ಲವೇ ನಿನಗೆ?

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.