ADVERTISEMENT

ತನ್ವೀರ್ ಸೇಠ್‍ ಉತ್ತಮ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಅವರನ್ನು ಸಂಪುಟದಿಂದ ಕೈ ಬಿಡಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 14:09 IST
Last Updated 24 ನವೆಂಬರ್ 2017, 14:09 IST
ತನ್ವೀರ್ ಸೇಠ್‍ ಉತ್ತಮ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಅವರನ್ನು ಸಂಪುಟದಿಂದ ಕೈ ಬಿಡಿ
ತನ್ವೀರ್ ಸೇಠ್‍ ಉತ್ತಮ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಅವರನ್ನು ಸಂಪುಟದಿಂದ ಕೈ ಬಿಡಿ   

ಮೈಸೂರು: ತನ್ವೀರ್ ಸೇಠ್ ಉತ್ತಮ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶಿಕ್ಷಣ ಖಾತೆಯನ್ನು ಬೇರೆಯವರಿಗೆ ವಹಿಸಿ. ಸಂಪುಟದಲ್ಲಿ ಸೇಠ್ ಅವರು ಇರಬಾರದು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಚಂಪಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕೆ ಬಾರದ ಹಾಗೂ ಸರಿಯಾಗಿ ಸ್ಪಂದಿಸದ ಸೇಠ್ ಅವರನ್ನು ಸಂಪುಟದಿಂದ ಕೈ ಬಿಡಿ ಎಂದಿದ್ದಾರೆ ಚಂಪಾ .

ಇದಕ್ಕೂ ಮುನ್ನ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸೇಠ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗಿರುವಷ್ಟು ಸೌಜನ್ಯ, ಸಮಯ, ಸಂಯಮ, ಶಿಕ್ಷಣ ಸಚಿವರಿಗಿಲ್ಲ. ನಾಡಗೀತೆ, ನಾಡಧ್ವಜದಂತೆಯೇ ನಮಗೆ ನಾಡ ಪಠ್ಯ ವ್ಯವಸ್ಥೆ ಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಪತ್ರ ಬರೆದಿದ್ದೆ. ಮುಖ್ಯಮಂತ್ರಿಗಳು ವಾರದಲ್ಲೇ ಉತ್ತರಿಸಿದರು. ಆದರೆ ಶಿಕ್ಷಣ ಸಚಿವರು ಸೌಜನ್ಯಕ್ಕಾದರೂ ಪ್ರತಿಕ್ರಿಯಿಸಿಲ್ಲ ಎಂದು ಬರಗೂರು ಹೇಳಿದ್ದಾರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.