ADVERTISEMENT

ಮಹಿಳೆಯರ ಆಶ್ರಯ ತಾಣಗಳು

ಹೆಣ್ಣುಮಕ್ಕಳ ವಸತಿ ಗೃಹ

​ಪ್ರಜಾವಾಣಿ ವಾರ್ತೆ
Published 24 ಮೇ 2019, 19:57 IST
Last Updated 24 ಮೇ 2019, 19:57 IST

ಕಾರ್ಯ ನಿಮಿತ್ತ ನಗರಕ್ಕೆ ಬರುವ ಗ್ರಾಮೀಣ ಭಾಗದ ಒಂಟಿ ಹೆಣ್ಣುಮಕ್ಕಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಟ್ರಾನ್ಸಿಟ್‌ ವಸತಿ ನಿಲಯಗಳನ್ನು ಅಭಿವೃದ್ಧಿಪಡಿಸಿದೆ.

ಪರೀಕ್ಷೆ, ಸಂದರ್ಶನ, ಇಲ್ಲವೇ ಕಾಲೇಜಿಗೆ ದಾಖಲಾಗಲು ನಗರಕ್ಕೆ ಬರುವ ಹೆಣ್ಣುಮಕ್ಕಳು ಭದ್ರತೆ ಇಲ್ಲದ ಪಿ.ಜಿ, ಹಾಸ್ಟೆಲ್‌ಗಳನ್ನು ಆಶ್ರಯಿಸುತ್ತಾರೆ. ಭವಿಷ್ಯದ ಯೋಜನೆಗಳು ಫಲಿಸುವ ಬಗ್ಗೆ ಖಾತರಿ ಇಲ್ಲದಿದ್ದರೂ ಸಾವಿರಾರು ರೂಪಾಯಿ ಕೊಟ್ಟು ಇಂಥಲ್ಲಿ ಉಳಿದುಕೊಳ್ಳಬೇಕು. ಈ ಸಮಸ್ಯೆಗಳಿಗೆ ಟ್ರಾನ್ಸಿಟ್‌ ವಸತಿ ಗೃಹಗಳು ಒಂದು ಪರಿಹಾರದಂತೆ.

‘ಮೊದಲಿನಿಂದಲೂ ವಸತಿಗೃಹಗಳು ಇವೆ. ಆದರೆ ಬೇರೆ ಭಾಗಗಳಿಂದ ಕೆಲಸ ಅಥವಾ ಪರೀಕ್ಷೆಗಾಗಿ ಬರುವ ಹೆಣ್ಣುಮಕ್ಕಳಿಗೆ ಸ್ಥಳಾವಕಾಶ ನೀಡಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಸರ್ಕಾರದಿಂದ ನಮಗೆ ಮಾಹಿತಿ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೂ ಮೂವರು ಹೆಣ್ಣುಮಕ್ಕಳು ಇಲ್ಲಿಗೆ ಬಂದು ಉಳಿದುಕೊಂಡು ಹೋಗಿದ್ದಾರೆ’ ಎಂದು ಯೂನಿವರ್ಸಿಟಿ ವುಮೆನ್‌ ಹಾಸ್ಟೆಲ್‌ ವಾರ್ಡನ್‌ ಲೀಲಾ ಹೇಳಿದರು.

ADVERTISEMENT

ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳು
* ಉಚಿತ ಕೊಠಡಿ, ಕೆಲವು ಕಡೆಗಳಲ್ಲಿ ಮಾತ್ರ ಊಟದ ವ್ಯವಸ್ಥೆ
* ನೀರು ಹಾಗೂ ಶೌಚಾಲಯ ವ್ಯವಸ್ಥೆ
* ಸಿಂಗಲ್‌, ಅಥವಾ ಶೇರಿಂಗ್ ರೂಮ್‌
* ಪ್ರತ್ಯೇಕ ಕಬೋರ್ಡ್ ಹಾಗೂ ಮಂಚ

ಹಾಸ್ಟೆಲ್‌ಗೆ ಹೋಗುವ ಮೊದಲು
* ಹಾಸ್ಟೆಲ್‌ ವಾರ್ಡನ್‌ ಅಥವಾ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ ಮೊದಲೇ ಮಾಹಿತಿ ನೀಡುವುದು
* ಬೆಂಗಳೂರಿಗೆ ಬಂದಿರುವ ಉದ್ದೇಶ ಹಾಗೂ ಅದಕ್ಕೆ ತಕ್ಕ ದಾಖಲೆ (ಉದಾಹರಣೆಗೆ ಪರೀಕ್ಷೆಗೆ ಬಂದಿದ್ದರೆ ಹಾಲ್‌ಟಿಕೆಟ್‌) ತರಬೇಕು
* ವಿಳಾಸ ಹಾಗೂ ಗುರುತಿನ ಚೀಟಿ ತರುವುದು ಕಡ್ಡಾಯ
* 18 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶ
* 18 ವರ್ಷಕ್ಕಿಂತ ಕಡಿಮೆ ಇದ್ದರೆ, ತಮ್ಮ ಪೋಷಕರೊಂದಿಗೆ ಬರುವ ಅವಕಾಶ ಇದೆ.

ವಾಸ್ತವ್ಯಕ್ಕೆ ಎಲ್ಲೆಲ್ಲಿ ಅವಕಾಶ?
ಕೆಎಸ್‌ಸಿಡಬ್ಲು ವರ್ಕಿಂಗ್ ವುಮನ್ಸ್ ಹಾಸ್ಟೆಲ್, ಜಯಮಹಲ್ (080-233304-846); ಶಾರದಾ ಕುಟೀರ ಹಾಸ್ಟೆಲ್, ಶಂಕರಪುರ (080-26674697); ಯಂಗ್ ವುಮನ್ ಕ್ರಿಶ್ಚಿಯನ್ ಅಸೋಸಿಯೇಶನ್ ಹಾಸ್ಟೆಲ್, ಮಿಷನ್ ರೋಡ್, (080-22238574); ಯೂನಿವರ್ಸಿಟಿ ವುಮನ್ ಅಸೋಸಿಯೇಶನ್ ಹಾಸ್ಟೆಲ್, ಸಂಪಂಗಿರಾಮನಗರ (080-22223314), ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್, ಶಾವಿಗೆ ಮಲ್ಲೇಶ್ವರ ಹಿಲ್ಸ್ (080-26662226); ಸ್ತ್ರೀ ಸಮಾಜ ಹಾಸ್ಟೆಲ್, ಜಯನಗರ (080-26674697); ಆಲ್ ಇಂಡಿಯಾ ವುಮನ್ ಕಾನ್ಫರೆನ್ಸ್ ಹಾಸ್ಟೆಲ್, ಜಯನಗರ (080-26349676); ಬಸವ ಸಮಿತಿ ಹಾಸ್ಟೆಲ್, ಮೈಸೂರು ರಸ್ತೆ (080-22723355); ವಿಶಾಲ್ ವಿದ್ಯಾ ಸಂಸ್ಥೆ ಹಾಸ್ಟೆಲ್, ಕನಕಪುರ ಮುಖ್ಯ ರಸ್ತೆ (9341289653); ಎಚ್‌ಡಿಎಸ್ ಹಾಸ್ಟೆಲ್, ಕೆಜಿಐಡಿ ಕಾಲೊನಿ; ನ್ಯಾಷನಲ್‌ ಲಾ ಸ್ಕೂಲ್ ಆಫ್ ಇಂಡಿಯಾ ಹಾಸ್ಟೆಲ್, ನಾಗರಬಾವಿ (080-23160531). ಯಂಗ್ ವುಮನ್ ಕ್ರಿಶ್ಚಿಯನ್ ಅಸೋಸಿಯೇಶನ್ ಹಾಸ್ಟೆಲ್, ಕೋರಮಂಗಲ (080-25634813). ರೀಜನಲ್ ಇನ್ಸಿಟ್ಯೂಟ್ ಆಫ್ ಇಂಗ್ಲಿಷ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್(080–23213243).

**

ಶಾಶ್ವತ ವ್ಯವಸ್ಥೆ ಅಲ್ಲ
‘ಹೆಣ್ಣುಮಕ್ಕಳಿಗೆ ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ. ಸಂದರ್ಶನ ಅಥವಾ ಪರೀಕ್ಷೆ ಮುಗಿದ ತಕ್ಷಣ ಅವರು ಕೊಠಡಿ ಖಾಲಿ ಮಾಡಬೇಕು. 3 ದಿನ ಅಲ್ಲಿರುವ ಅವಕಾಶ ಇದೆ. ಕೆಲವು ಸಂದರ್ಭಗಳಲ್ಲಿ ಒಂದು ವಾರಗಳ ಕಾಲ ಉಳಿಯುವ ಅವಕಾಶ ನೀಡಬಹುದು. ಆದರೆ ಇದಕ್ಕೆಲ್ಲಾ ಸರಿಯಾದ ದಾಖಲೆ ಬೇಕು’
–ಅಂಜಲಿ ರಾಮಣ್ಣ, ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.