ADVERTISEMENT

ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 5:34 IST
Last Updated 17 ಫೆಬ್ರುವರಿ 2024, 5:34 IST
   

19ರಂದು ಪುರಂದರ ದಾಸರ ಆರಾಧನಾ ಮಹೋತ್ಸವ  

ಪುರಂದರ ನಮನ ಸಂಗೀತ ಸುಧೆ ಕಾರ್ಯಕ್ರಮವನ್ನು ಸೋಮವಾರ ಫೆ.19ರಂದು ಹಮ್ಮಿಕೊಳ್ಳಲಾಗಿದೆ. ವಿ. ಡಾ. ಅರ್ಚನಾ ಕುಲಕರ್ಣಿ ಮತ್ತು ತಂಡದವರು ಪ್ರಸ್ತುತ ಪಡಿಸುತ್ತಿದ್ದಾರೆ. ಅಂದು ಸಂಜೆ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಮತ್ತು ವ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. 

 ಮೈಸೂರಿನ ಶ್ರೀನಿವಾಸಮೂರ್ತಿ ಆಚಾರ್ಯರು, ಶಿರಸಿಯ ಸೊಂದ ಸ್ವರ್ಣವಲ್ಲಿ ಮಹಾ ಸಂಸ್ಥಾನದ ರತ್ನಾಕರ ರಘುಪತಿ ಭಟ್ಟಸುಗಾವಿ, ಪುತ್ತೂರು ನರಸಿಂಹನಾಯಕ್‌ ಅವರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.  ಡಾ. ಆರ್‌.ಕೆ. ಪದ್ಮನಾಭ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

ADVERTISEMENT

ಡಾ. ಸಂತೋಷ ಹೆಗ್ಡೆ, ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

20ರಂದು  ಕನಕದಾಸರ ಆರಾಧನೆ 

ಗುರಾಘವೆಂದ್ರ ಸಂಸ್ಮರಣ ಪ್ರಶಸ್ತಿ ಹಾಗೂ ಕನಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು 20ರಂದು ಮಂಗಳವಾರ  ಸಂಜೆ ಹಮ್ಮಿಕೊಳ್ಳಲಾಗಿದೆ. 

ಸಂಸ್ಮರಣ ಪ್ರಶಸ್ತಿಯನ್ನು ಬಾಗಲಕೋಟೆಯ ‍ಪಂಡಿತ್‌ ಅನಂತಕುಲಕರ್ಣಿ ಅವರಿಗೆ ಹಾಗೂ ಪುತ್ತೂರಿನ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ಈ ಸಮಾರಂಭದ ನಂತರ ಪುತ್ತೂರಿನ ನೃತ್ಯ ನಿರುತ ಶಾಲೆಯ ಡಾನಿಶಿತಾ ‍ಪುತ್ತೂರು ತಂಡ ಬಾಗಿಲನು ತೆರೆದು ನೃತ್ಯರೂಪಕ ಪ್ರಸ್ತುತಪಡಿಸಲಿದೆ.

21ರಂದು ತ್ಯಾಗರಾಜರ ಆರಾಧನೆ

ಸಪ್ತಸ್ವರ ಸಂಗೀತ ಸ್ಪರ್ಶಮಣಿ ಬಿರುದು ಸಮಾರಂಭ; ಅಧ್ಯಕ್ಷತೆ: ಡಾ. ಆರ್‌.ಕೆಪದ್ಮನಾಭ, ವಿಶೇಷ ಅತಿಥಿ: ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಉಪಸ್ಥಿತರಿರಲಿದ್ದಾರೆ. ಡಾ. ರಾಯಚೂರು ಶೇಷಗಿರಿದಾಸ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಅವರು ಗಾನಸುಧೆಯನ್ನು ಪ್ರಸ್ತುತಪಡಿಸುವರು. ಈ ಕಛೇರಿ ಯ ನಂತರ ವಿ. ಪದ್ಮಿನಿ ಅಚ್ಚಿ ಅವರ ತಂಡ ತ್ಯಾಘ ವೈಭವಂ ಪ್ರಸ್ತುತ ಪಡಿಸುವುದು.

22ರಂದು ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರಿನ ಡಾ.ರಂಗನಾಥ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.  ಅಧ್ಯಕ್ಷತೆ: ಡಾ. ಆರ್‌.ಕೆಪದ್ಮನಾಭ, ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ನಾಟ್ಯ ಸರಸ್ವತಿ ನೃತ್ಯಶಾಲೆಯ ನಾಗಶ್ರೀ ರಾಘವೇಂದ್ರ ಹಾಗೂ ನಾಟ್ಯ ಸಂಕುಲ ನೃತ್ಯ ಶಾಲೆಯ ನಿವೇದಿತಾ ಶರ್ಮಾ ಅವರ ತಂಡವು ನೃತ್ಯ ಪ್ರಸ್ತುತಪಡಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.