ADVERTISEMENT

ಹೊಸ ಹುಂಡೈ ಕ್ರೆಟಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 20:32 IST
Last Updated 17 ಜನವರಿ 2024, 20:32 IST
ಹುಂಡೈ ಮೋಟರ್‌ ಇಂಡಿಯಾ ಸಿಇಒ ಅನ್ ಸೂ ಕಿಮ್ ಅವರು ಗುರುಗ್ರಾಮದಲ್ಲಿ ಹೊಸ ಹುಂಡೈ ಕ್ರೆಟಾ ಕಾರನ್ನು ಬಿಡುಗಡೆ ಮಾಡಿದರು
ಹುಂಡೈ ಮೋಟರ್‌ ಇಂಡಿಯಾ ಸಿಇಒ ಅನ್ ಸೂ ಕಿಮ್ ಅವರು ಗುರುಗ್ರಾಮದಲ್ಲಿ ಹೊಸ ಹುಂಡೈ ಕ್ರೆಟಾ ಕಾರನ್ನು ಬಿಡುಗಡೆ ಮಾಡಿದರು   

ಬೆಂಗಳೂರು: ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿ ಹುಂಡೈ ಮೋಟರ್ಸ್‌ ತನ್ನ ಹೊಸ ಹುಂಡೈ ಕ್ರೆಟಾ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  

ಈ ಕಾರುಗಳ ಎಕ್ಸ್ ಷೋರೂಂ ಬೆಲೆ ₹10.99 ಲಕ್ಷದಿಂದ ಆರಂಭವಾಗಲಿದೆ. ಇ, ಎಎಕ್ಸ್‌, ಎಸ್‌, ಎಸ್‌(ಒ), ಎಸ್‌ಎಕ್ಸ್‌ ಮತ್ತು ಎಸ್‌ಎಕ್ಸ್‌ ಟೆಕ್‌ ಆವೃತ್ತಿಗಳಲ್ಲಿ ಕಾರುಗಳು ಲಭ್ಯವಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ಶ್ರೇಣಿಯ ಕಾರುಗಳು ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.