ನವದೆಹಲಿ: ಬ್ರಿಟಿಷ್ ವಾಹನ ತಯಾರಿಕ ಕಂಪನಿ ಜಾಗ್ವಾರ್ ಹೊಸ ಲೋಗೊ ಅನಾವರಣ ಮಾಡಿದೆ.
1935ರಿಂದ ವಿವಿಧ ರೀತಿಯ ವಾಹನಗಳನ್ನು ಜಾಗ್ವಾರ್ ಪರಿಚಯಿಸುತ್ತಾ ಬಂದಿದೆ. ಇದೀಗ 2026ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ತಯಾರಿಯಲ್ಲಿರುವ ಕಂಪನಿ ಹೊಸ ಲೋಗೊ ಮೂಲಕ ಬದಲಾವಣೆಗೆ ಮುಂದಡಿಯಿಟ್ಟಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿರು ವಿಡಿಯೊವೊಂದನ್ನು ಹಂಚಿಕೊಂಡಿರುವ ಜಾಗ್ವಾರ್, ಬಣ್ಣಗಳ ನಡುವೆ ಲೋವರ್ ಕೇಸ್ ಲೆಟರ್‌ನಲ್ಲಿ ಜಾಗ್ವಾರ್ ಎಂದು ಬರೆದಿರುವುದನ್ನು ಕಾಣಬಹುದು.
ಬ್ರ್ಯಾಂಡ್‌ನ ಹೊಸ ಗುರುತು ಜಾಗ್ವಾರ್‌ನ ‘ಆಲ್-ಎಲೆಕ್ಟ್ರಿಕ್ 4-ಡೋರ್ GT’ ಪರಿಕಲ್ಪನೆಯನ್ನು 2024ರ ಡಿಸೆಂಬರ್‌ನಲ್ಲಿ ಅನಾವರಣಗೊಳಿಸಲಿದೆ. ಈ ಮೂಲಕ ಜಾಗ್ವಾರ್ ಎಲೆಕ್ಟ್ರಿಕ್ ಮಾಡೆಲ್ ಅನಾವರಣಗೊಳ್ಳಲಿದ್ದು 2026ರಲ್ಲಿ ಮಾರಾಟಕ್ಕೆ ಸಿದ್ದವಾಗಲಿದೆ ಎಂದು ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.