ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ, ‘ಕ್ಯೂ8ಸೆಲೆಬ್ರೇಷನ್’ ಹೆಸರಿನ ಹೊಸ ಮಾದರಿಯ ಕಾರನ್ನು ಭಾರತದಲ್ಲಿಬಿಡುಗಡೆಮಾಡಿದೆ. ಈ ಕಾರಿನ ಎಕ್ಸ್–ಷೋರೂಂ ಬೆಲೆ
₹ 98.98 ಲಕ್ಷ. ದಸರಾ ಮತ್ತು ದೀಪಾವಳಿ ಹಬ್ಬಗಳ ಹೊತ್ತಿನಲ್ಲಿ ಕಂಪನಿಯು ಈ ಕಾರನ್ನು ಮಾರುಕಟ್ಟೆಗೆ ತಂದಿದೆ.
ಈ ಕಾರು 3 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿದೆ. ಕೇವಲ 5.9 ಸೆಕೆಂಡುಗಳ ಅವಧಿಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀ. ವೇಗ ತಲುಪುತ್ತದೆ ಎಂದು ಕಂಪನಿ ಹೇಳಿದೆ. ಕಚ್ಚಾ ರಸ್ತೆಗಳಿಗೂ ಸರಿಹೊಂದುವ ರೀತಿಯಲ್ಲಿ ಕಾರಿನ ವಿನ್ಯಾಸ ಇದೆ.
‘ದೇಶದ ಆಟೊಮೊಬೈಲ್ ಉದ್ಯಮವು ಈ ಹಬ್ಬಗಳ ಅವಧಿಯಲ್ಲಿ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ. ಈಗ ನಾವು ನಮ್ಮ ಕ್ಯೂ ಸರಣಿಯಲ್ಲಿ ಹೊಸದಾದ ಒಂದು ಕಾರನ್ನು ಪರಿಚಯಿಸುತ್ತಿದ್ದೇವೆ. ಈ ವರ್ಷದ ಜನವರಿಯಲ್ಲಿಕ್ಯೂ8ಕಾರನ್ನು ಮೊದಲ ಬಾರಿಗೆಬಿಡುಗಡೆಮಾಡಲಾಗಿತ್ತು. ಅಂದಿನಿಂದಲೂ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈಕ್ಯೂ8ಸೆಲೆಬ್ರೇಷನ್ಕಾರಿನ ಬಿಡುಗಡೆಯ ಕಾರಣದಿಂದಾಗಿ, ಕ್ಯೂ ಸರಣಿ ಕುರಿತು ಜನರಿಗೆ ಇರುವ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ ಎಂಬ ನಂಬಿಕೆ ನಮಗಿದೆ’ ಎಂದು ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಸನ್ರೂಫ್, ಎಂಟು ಏರ್ಬ್ಯಾಗ್ಗಳು, ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ, ಎಲ್ಇಡಿ ಹೆಡ್ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಈ ಕಾರಿನಲ್ಲಿ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.