ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕವಿರಾಟ್ ಕೊಹ್ಲಿ ಮತ್ತು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಭಾರತದ ಮಾರುಕಟ್ಟೆಗೆ ಹೊಸ ಔಡಿ ಕ್ಯು8 ಎಸ್‌ಯುವಿ ಅನ್ನು ಬುಧವಾರ ಬಿಡುಗಡೆ ಮಾಡಿದರು.
3 ಲೀಟರ್ ಟ್ರಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂಡಿರುವ ಕ್ಯು8 0–100 ಕಿ.ಮೀ ವೇಗ ಮುಟ್ಟಲು ಕೇವಲ 5.9ಸೆಕೆಂಡ್‌ತೆಗೆದುಕೊಳ್ಳುತ್ತದೆ.
ಕಂಪೆನಿಯ ಬಹು ನಿರೀಕ್ಷಿತ, ಅತ್ಯಾಧುನಿಕ ಹಾಗೂ ದುಬಾರಿ ಎಸ್‌ಯುವಿ ಇದಾಗಿದ್ದು,ಇದರ ಎಕ್ಸ್ ಷೋರೂಂ ಬೆಲೆ ₹1.34 ಕೋಟಿ. ಸದ್ಯ 200 ಎಸ್‌ಯುವಿಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ.
‘ಐಷಾರಾಮಿ ಕಾರುಗಳ ಮೇಲೆ ಆಮದು ತೆರಿಗೆ ಮತ್ತು ಜಿಎಸ್‌ಟಿ ಹೆಚ್ಚಿರುವುದರಿಂದ ಬೆಲೆ ದುಬಾರಿಯಾಗಿದೆ. ಸರ್ಕಾರವು ಜಿಎಸ್‌ಟಿಯನ್ನು ಇಳಿಸಿದರೆ, ಮಾರುಕಟ್ಟೆ ಸುಧಾರಿಸಬಹುದು’ಎಂದು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.