ಮುಂಬೈ : ಬಜಾಜ್ ಆಟೊ ಕಂಪನಿಯು ತನ್ನ ಬಹುನಿರೀಕ್ಷಿತ ಇ–ಸ್ಕೂಟರ್ ಚೇತಕ್ ಅನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದರ ಎಕ್ಸ್ ಷೋರೂಂ ಬೆಲೆ ₹ 1 ಲಕ್ಷದಿಂದ ₹ 1.15 ಲಕ್ಷದವರೆಗೆ ಇರಲಿದೆ. ಈ ಬೆಲೆಯು ಸಬ್ಸಿಡಿ ಒಳಗೊಂಡಿದ್ದು, ವಿಮೆ ಮತ್ತು ಆನ್ ರೋಡ್ ತೆರಿಗೆ ಒಳಗೊಂಡಿಲ್ಲ ಎಂದು ಕಂಪನಿ ತಿಳಿಸಿದೆ.
ಆಕರ್ಷಕ ಮತ್ತು ಬಳಕೆಗೆ ಯೋಗ್ಯವಾದ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಚೇತಕ್ ಸರಣಿಯಲ್ಲಿ ಇದನ್ನು ಬಿಡುಗುಡೆ ಮಾಡಲಾಗಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ತಿಳಿಸಿದ್ದಾರೆ.
ಬುಧವಾರದಿಂದ ಬುಕಿಂಗ್ ಆರಂಭವಾಗಲಿದ್ದು, ಫೆಬ್ರುವರಿಯಿಂದ ವಿತರಣೆ ಅರಂಭವಾಗಲಿದೆ.
ಬೆಲೆ;₹ 1 ಲಕ್ಷದಿಂದ ಆರಂಭ
ಲಭ್ಯತೆ; ಆರಂಭದಲ್ಲಿ ಬೆಂಗಳೂರು, ಪುಣೆ
ಅರ್ಬನ್, ಪ್ರೀಮಿಯಂ ಮಾದರಿಗಳಲ್ಲಿ ಲಭ್ಯ
ಹೋಮ್ ಚಾರ್ಜಿಂಗ್ ಸ್ಟೇಷನ್ ಒಳಗೊಂಡಿದೆ
₹ 2 ಸಾವಿರಕ್ಕೆ ಆನ್‌ಲೈನ್‌ಲ್ಲಿ ಬುಕಿಂಗ್ ಆಯ್ಕೆ
12 ಸಾವಿರ ಕಿ.ಮೀ ಅಥವಾ ಒಂದು ವರ್ಷದ ಸೇವಾ ನಿರ್ವಹಣೆ
50 ಸಾವಿರ ಕಿ.ಮೀ ಅಥವಾ ಮೂರು ವರ್ಷಗಳವರೆಗೆ ಒಟ್ಟಾರೆ ವಾರಂಟಿ (ಲೀಥಿಯಂ ಅಯಾನ್ ಬ್ಯಾಟರಿ ಸೇರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.