ADVERTISEMENT

ಪಲ್ಸರ್‌ ಎನ್‌ಎಸ್‌400ಝಡ್‌ ಬೈಕ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2024, 22:53 IST
Last Updated 9 ಮೇ 2024, 22:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್‌ ಆಟೊ, ಪಲ್ಸರ್‌ ಎನ್‌ಎಸ್‌400ಝಡ್‌ ಮೋಟಾರ್‌ಸೈಕಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಇದು ಪಲ್ಸರ್‌ ಎನ್‌ಎಸ್‌ಡಿಎನ್‌ಎಯಿಂದ ಪ್ರೇರಿತವಾಗಿದೆ. 373 ಸಿಸಿ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌, ಆರು ಸ್ಪೀಡ್‌ ಗೇರ್‌ ಬಾಕ್ಸ್‌ ಹೊಂದಿದೆ. ಎಲ್‌ಇಡಿ ಪ್ರಾಜೆಕ್ಟರ್‌ ಹೆಡ್‌ಲ್ಯಾಂಪ್‌ ಹಾಗೂ ಸಂಪೂರ್ಣ ಡಿಜಿಟಲ್‌ ಕಲರ್‌ ಎಲ್‌ಸಿಸಿ ಸ್ಪೀಡೊಮೀಟರ್‌ ವ್ಯವಸ್ಥೆ ಹೊಂದಿದೆ. ಬ್ಲೂಟೂಥ್ ಕನೆಕ್ಟಿವಿಟಿ, ನ್ಯಾವಿಗೇಷನ್‌, ಮ್ಯೂಸಿಕ್ ಕಂಟ್ರೋಲ್‌ ಸೌಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ. 

ಈ ಬೈಕ್‌ನಲ್ಲಿ ರೈಡ್‌ ಬೈ ವೈರ್‌ ತಂತ್ರಜ್ಞಾನ ಅಳವಡಿಸಲಾಗಿದ್ದು, ಸವಾರರು ನಿರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಹೊಸ ವೈಶಿಷ್ಟ್ಯ ಒಳಗೊಂಡಿದ್ದು, ಉತ್ತಮ ಸವಾರಿಯ ಅನುಭವವನ್ನು ನೀಡುತ್ತದೆ ಎಂದು ಹೇಳಿದೆ.

ADVERTISEMENT

ನವದೆಹಲಿಯಲ್ಲಿ ಪಲ್ಸರ್‌ ಎನ್‌ಎಸ್‌400ಝಡ್‌ನ ಎಕ್ಸ್‌ ಷೋರೂಂ ಬೆಲೆ ₹1.85 ಲಕ್ಷ ಆಗಿದೆ. ₹5 ಸಾವಿರ ಪಾವತಿಸಿ ಬುಕಿಂಗ್‌ ಮಾಡಬಹುದಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.