ನವದೆಹಲಿ: ಸೂಪರ್‌ಬೈಕ್‌ಗಳನ್ನು ತಯಾರಿಸುವ ಬನೆಲಿ ಕಂಪನಿಯು ಸಾಹಸಮಯ ಪ್ರವಾಸಕ್ಕೆ ಅನುಕೂಲ ಆಗುವ ಹೊಸ ಮಾದರಿ ಟಿಆರ್‌ಕೆ 251 ದ್ವಿಚಕ್ರ ವಾಹನವನ್ನುಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದರ ಎಕ್ಸ್ ಷೋರೂಂ ಬೆಲೆಯು ₹ 2.51 ಲಕ್ಷ ಇದೆ.
ಈ ಬೈಕ್ 250ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 25.8 ಪಿಎಸ್ ಶಕ್ತಿ ಉತ್ಪಾದಿಸುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಟಿಆರ್‌ಕೆ ಸರಣಿಯಲ್ಲಿ ಹೊಸ ಬೈಕ್ ಇದಾಗಿದ್ದು, 18 ಲೀಟರ್‌ನ ಇಂಧನ ಟ್ಯಾಂಕ್ ಹೊಂದಿದೆ.
ಹೊಂದಿಸಬಹುದಾದ ಬ್ರೇಕ್ ಮತ್ತು ಕ್ಲಚ್ ಲಿವರ್ಸ್, 5 ವೋಲ್ಟ್ಸ್ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಹೊಂದಿದೆ. ಮೂರು ವರ್ಷಗಳ ಅನಿಯಮಿತ ಕಿಲೋ ಮೀಟರ್ ವಾರಂಟಿ ಇದೆ ಎಂದು ಕಂಪನಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.