ADVERTISEMENT

ಬಿಎಂಡಬ್ಲ್ಯು 5 ಸಿರೀಸ್‌ನ ಫೇಸ್‌ಲಿಫ್ಟ್‌ ಆವೃತ್ತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 21:49 IST
Last Updated 24 ಜೂನ್ 2021, 21:49 IST
ಬಿಎಂಡಬ್ಲ್ಯು 5 ಸಿರೀಸ್‌ ಕಾರು
ಬಿಎಂಡಬ್ಲ್ಯು 5 ಸಿರೀಸ್‌ ಕಾರು   

ಬೆಂಗಳೂರು: ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು, ‘5 ಸಿರೀಸ್‌’ನ ಫೇಸ್‌ಲಿಫ್ಟ್‌ ಸೆಡಾನ್‌ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರನ್ನು ಚೆನ್ನೈನಲ್ಲಿ ಇರುವ ಘಟಕದಲ್ಲಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಕಾರಿನ ಬೆಲೆಯು ₹ 62.90 ಲಕ್ಷದಿಂದ (ಎಕ್ಸ್‌ ಷೋರೂಂ) ಆರಂಭವಾಗುತ್ತದೆ.

ಈ ಕಾರು ಪೆಟ್ರೋಲ್‌ ಹಾಗೂ ಡೀಸೆಲ್ ಎಂಜಿನ್ ಆವೃತ್ತಿಗಳಲ್ಲಿ ಲಭ್ಯವಿದೆ. ಬುಕಿಂಗ್‌ ಗುರುವಾರದಿಂದಲೇ ಶುರುವಾಗಿದೆ. ‘ಈ ಸರಣಿಯ ಕಾರುಗಳಿಗೆ ಎದುರಾಳಿಯೇ ಇಲ್ಲ’ ಎಂದು ಬಿಎಂಡಬ್ಲ್ಯು ಕಂಪನಿಯ ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್ ಹೇಳಿದ್ದಾರೆ.

ಈ ಕಾರಿನಲ್ಲಿ ಇರುವ 2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌, ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ಕೇವಲ 6.1 ಸೆಕೆಂಡ್‌ಗಳಲ್ಲಿ ಸಾಧಿಸುತ್ತದೆ. 2 ಲೀಟರ್‌ ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಆವೃತ್ತಿಯಲ್ಲಿಯೂ ಈ ಕಾರು ಲಭ್ಯವಿದ್ದು, ಇದು ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು 7.3 ಸೆಕೆಂಡುಗಳಲ್ಲಿ ಸಾಧಿಸುತ್ತದೆ ಎಂದು ಕಂಪನಿ ಹೇಳಿದೆ. 3 ಲೀಟರ್‌ ಸಾಮರ್ಥ್ಯದ ಡೀಸೆಲ್ ಎಂಜಿನ್‌ ಇರುವ ಈ ಕಾರಿನ ಇನ್ನೊಂದು ಆವೃತ್ತಿಯು ಇದೇ ವೇಗವನ್ನು ಕೇವಲ 5.7 ಸೆಕೆಂಡುಗಳಲ್ಲಿ ತಲುಪುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.