ಬೆಂಗಳೂರು: ನಿತ್ಯದ ಸಂಚಾರ, ಡೆಲಿವರಿ ಹಾಗೂ ಮಾರಾಟಗಾರರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು 'ಇಬೈಕ್‌ಗೊ' ಸ್ಟಾರ್ಟ್ಅಪ್ ಬಾಡಿಗೆ ನೀಡುತ್ತಿದೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ಕಂಪನಿ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳಲಾಗಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 2020ರ ವೇಳೆಗೆ ಶೇ 10ರಷ್ಟು ಪಾಲುದಾರಿಕೆ ವಿಸ್ತರಿಸಿಕೊಳ್ಳುವ ಗುರಿ ಹೊಂದಿದೆ. ಪ್ರಸ್ತುತ ಬೆಂಗಳೂರು, ಮುಂಬೈ, ದೆಹಲಿ, ಅಮೃತಸರ, ಹೈದರಾಬಾದ್ ಹಾಗೂ ಜೈಪುರದಲ್ಲಿ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡುತ್ತಿದೆ.
ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಅಳವಡಿಸಿಕೊಳ್ಳಲಾಗಿದೆ. ವರದಿಗಳ ಪ್ರಕಾರ, ಭಾರತದಲ್ಲಿ ಸುಸ್ಥಿರ ಸಂಚಾರ ಸಾರಿಗೆ ಬೇಡಿಕೆ ಶೇ 44ರಷ್ಟು (2019-2025) ಹೆಚ್ಚಳವಾಗಲಿದೆ. ಬೇಡಿಕೆಗೆ ಅನುಗುಣವಾಗಿ 2020ಕ್ಕೆ ಇಬೈಕ್‌ಗೊ 5,000 ಸ್ಮಾರ್ಟ್ ಬೈಕ್‌ಗಳನ್ನು ಕಾರ್ಯಾಚರಿಸಲು ಸಿದ್ಧತೆ ನಡೆಸಿದೆ.
ಪುಣೆ ಮತ್ತು ಚೆನ್ನೈಗೂ ಕಾರ್ಯಾಚರಣೆ ವಿಸ್ತರಿಸಲಾಗುತ್ತಿದೆ. ಇ-ಕಾಮರ್ಸ್ ಉದ್ಯಮಗಳಾದ ಬಿಗ್ ಬ್ಯಾಸ್ಕೆಟ್, ಜೊಮ್ಯಾಟೊ, ಮಿಂತ್ರ, ಇನ್ನಿತರೆ ಸಂಸ್ಥೆಗಳಿಗೆ ಡೆಲಿವರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪೂರೈಸುತ್ತಿದೆ.
eBikeGO ವೆಬ್‌ಸೈಟ್ ಮೂಲಕ ಇ-ಸ್ಕೂಟರ್ ಬಾಡಿಗೆಗೆ ಪಡೆಯಬಹುದು. ಒಂದು ತಿಂಗಳಿಂದ ವರ್ಷದ ವರೆಗೂ ಬಾಡಿಗೆ ಸೌಲಭ್ಯವಿದ್ದು, ತಿಂಗಳಿಗೆ ₹3,300 ಬಾಡಿಗೆ ಪಾವತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.