ADVERTISEMENT

ಆಗಸ್ಟ್‌ 15ಕ್ಕೆ ಸಿಂಪಲ್‌ ಎನರ್ಜಿ ಕಂಪನಿಯ ಮೊದಲ ಇ–ಸ್ಕೂಟರ್‌ ಮಾರುಕಟ್ಟೆಗೆ

ಪಿಟಿಐ
Published 15 ಮೇ 2021, 10:13 IST
Last Updated 15 ಮೇ 2021, 10:13 IST

ಮುಂಬೈ: ವಿದ್ಯುತ್‌ ಚಾಲಿತ ವಾಹನಗಳನ್ನು (ಇವಿ) ತಯಾರಿಸುವ ನವೋದ್ಯಮ ಸಿಂಪಲ್‌ ಎನರ್ಜಿ, ಆಗಸ್ಟ್‌ 15ರಂದು ತನ್ನ ಮೊದಲ ಇ–ಸ್ಕೂಟರ್ ಬಿಡುಗಡೆ ಮಾಡುವುದಾಗಿ ಶನಿವಾರ ಹೇಳಿದೆ.

ಇ–ಸ್ಕೂಟರ್‌ ಬೆಲೆಯು ₹ 1.10 ಲಕ್ಷದಿಂದ ₹ 1.20 ಲಕ್ಷದವರೆಗೆ ಇರಲಿದೆ ಎಂದು ಕಂಪನಿ ತಿಳಿಸಿದೆ.ಹೊಸ ಇ–ಸ್ಕೂಟರ್‌ 4.8 ಕಿಲೋ ವಾಟ್‌ ಲೀಥಿಯಂ ಅಯಾನ್‌ ಬ್ಯಾಟರಿ ಹೊಂದಿರಲಿದ್ದು, ಇಕೊ ಮೋಡ್‌ನಲ್ಲಿ 240 ಕಿ.ಮೀ ಮತ್ತು ಗರಿಷ್ಠ ವೇಗ ಗಂಟೆಗೆ 100 ಕಿ.ಮೀ ಇರಲಿದೆ ಎಂದು ಹೇಳಿದೆ.

ಮೊದಲ ಹಂತದಲ್ಲಿ ಬೆಂಗಳೂರು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಬಳಿಕ ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಬಿಡುಗಡೆ ಆಗಲಿದೆ. ನಂತರ ಬೇರೆ ನಗರಗಳನ್ನೂ ಪ್ರವೇಶಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ತಯಾರಿಕಾ ಘಟಕವನ್ನಷ್ಟೇ ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಕೆಂದ್ರವನ್ನೂಬೆಂಗಳೂರಿನಲ್ಲಿ ಹೊಂದಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 112 ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿ ಉದ್ದೇಶಿಸಿದೆ. ಸ್ಕೂಟರ್‌ ಬಿಡುಗಡೆಗೂ ಮುನ್ನವೇ ಬೆಂಗಳೂರಿನಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನೂ ಸ್ಥಾಪಿಸುವ ಆಲೋಚನೆ ಇದೆ ಎಂದೂ ಕಂಪನಿ ತಿಳಿಸಿದೆ.

ಭಾರತದ ಕಂಪನಿ ತಯಾರಿಸಿರುವ ವಿಶ್ವದರ್ಜೆಯ ಉತ್ಪನ್ನದ ಮೂಲಕ ಇತಿಹಾಸ ಸೃಷ್ಟಿಸುವ ಗುರಿಯನ್ನು ಸಿಂಪಲ್ ಎನರ್ಜಿ ಹೊಂದಿದೆ ಎಂದು ಕಂಪನಿಯ ಸ್ಥಾಪಕ ಸುಹಾಸ್‌ ರಾಜ್‌ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.