ಒನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ಸ್ ಕಂಪನಿಯು ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಕ್ 'ಕ್ರಿಡನ್' (KRIDN) ಬಿಡುಗಡೆ ಮಾಡಿದೆ. ಇದೇ ಅಕ್ಟೋಬರ್‌ನಿಂದ ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ಬೈಕ್ ಖರೀದಿಗೆ ಸಿಗಲಿದೆ.
ಬೈಕ್ ಗಂಟೆಗೆ 95 ಕಿ.ಮೀ. ವೇಗ ಮತ್ತು ಟಾರ್ಕ್ 165 ಎಎಂ ಹೊಂದಿದ್ದು, ಶೂನ್ಯದಿಂದ ಗಂಟೆಗೆ 60 ಕಿ.ಮೀ. ವೇಗವನ್ನು 8 ಸೆಕೆಂಟ್‌ಗಳಲ್ಲಿ ತಲುಪುವುದಾಗಿ ಕಂಪನಿ ಹೇಳಿದೆ. ಪ್ರಸ್ತುತ ದೇಶದಲ್ಲಿ ಮಾರಾಟಕ್ಕಿರುವ ಎಲೆಕ್ಟ್ರಿಕ್ ಬೈಕ್‌ಗಳ ಪೈಕಿ ಕ್ರಿಡನ್ ಅತ್ಯಂತ ವೇಗದ ಮತ್ತು ಶಕ್ತಿಶಾಲಿ ವಾಹನವಾಗಿದೆ. ಸಿಯೆಟ್‌ನ ಅಗಲವಾದ ಟೈರ್‌ಗಳು, ಬಲಿಷ್ಠ ಸಸ್ಪೆನ್ಷನ್‌ಗಳಿದ್ದು ದೀರ್ಘಕಾಲ ಬಾಳಿಕೆ ಬರುವಂತೆ ತಯಾರಿಸಿರುವುದಾಗಿ ಒನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸಿಇಒ ಗೌರವ್ ಉಪ್ಪಾಲ್ ತಿಳಿಸಿದ್ದಾರೆ.
ದೆಹಲಿ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಂತಹ ನಗರಗಳಲ್ಲಿನ ಸಂಚಾರಕ್ಕೆ ಸುಲಭವಾಗುವಂತೆ ಬೈಕ್ ವಿನ್ಯಾಸಗೊಳಿಸಲಾಗಿದೆ. ಟ್ಯಾಕ್ಸಿ ಸರ್ವಿಸ್ ಹಾಗೂ ಡೆಲಿವರಿಗಳಿಗಾಗಿ ಇ–ಬೈಕ್‌ಗಳನ್ನು ಪೂರೈಸಲು ಕಂಪನಿ ಉತ್ಸುಕತೆ ತೋರಿದೆ. ಪ್ರಸ್ತುತ ಬೈಕ್ ಬೆಲೆ ₹1.29 ಲಕ್ಷ ನಿಗದಿಯಾಗಿದೆ.
ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಬ್ಯಾಟರಿ (5 ಕಿಲೊ ವ್ಯಾಟ್) ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 'ಎಕೊ ಮೋಡ್'ನಲ್ಲಿ 120 ಕಿ.ಮೀ. ಮತ್ತು ಸಾಮಾನ್ಯ ಮೋಡ್‌ನಲ್ಲಿ 80 ಕಿ.ಮೀ. ದೂರದವರೆಗೂ ಸಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.