ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಟಕ್ಸನ್ ಎಸ್‌ಯುವಿಯ ಹೊಸ ಆವೃತ್ತಿಯನ್ನು ಬುಧವಾರ ಅನಾವರಣಗೊಳಿಸಿದೆ. ಮುಂದಿನ ತಿಂಗಳು ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆಯನ್ನು ಕಂಪನಿ ಹೊಂದಿದೆ.
ನಾಲ್ಕನೇ ಪೀಳಿಗೆಯ ಈ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಕ್ರಮವಾಗಿ 6 ಮತ್ತು 8 ಸ್ಪೀಡ್ ಆಟೊಮೆಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿದೆ.
ಎರಡನೇ ಹಂತದ ಸುಧಾರಿತ ಚಾಲನಾ ಸಹಾಯ ವ್ಯವಸ್ಥೆಯನ್ನು (ಎಡಿಎಎಸ್) ಇದು ಹೊಂದಿದೆ. ಕ್ಯಾಮೆರಾ ಮತ್ತು ರೇಡಾರ್ ಸೆನ್ಸರ್ ಮೂಲಕ ರಸ್ತೆಯಲ್ಲಿ ಕಾರು, ಪಾದಚಾರಿ ಅಥವಾ ಸೈಕಲ್ ಸವಾರರನ್ನು ಇದು ಗುರುತಿಸಬಲ್ಲದು ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.