ನವದೆಹಲಿ: ಇಂಗಾಲದ ಹೊರಸೂಸುವಿಕೆಯನ್ನು 2039ರೊಳಗೆ ಶೂನ್ಯಕ್ಕೆ ತಗ್ಗಿಸುವ ಕಂಪನಿ ತಾನಾಗಬೇಕು ಎಂಬ ಬಯಕೆ ಇರುವುದಾಗಿ ಟಾಟಾ ಮೋಟರ್ಸ್ ಮಾಲೀಕತ್ವದ ‘ಜಾಗ್ವಾರ್ ಲ್ಯಾಂಡ್ ರೋವರ್’ (ಜೆಎಲ್‌ಆರ್) ಕಂಪನಿ ಹೇಳಿದೆ. ಇದರ ಭಾಗವಾಗಿ 2025ರಿಂದ ಜಾಗ್ವಾರ್ ಸಂಪೂರ್ಣ ವಿದ್ಯುತ್ ಚಾಲಿತ ಐಷಾರಾಮಿ ಕಾರುಗಳನ್ನು ಮಾರುಕಟ್ಟೆಗೆ ಬಿಡಲಿದೆ.
ಹೊಸ ಕಾರ್ಯತಂತ್ರದ ಭಾಗವಾಗಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ನ ಎಲ್ಲ ಮಾದರಿಗಳು ಈ ದಶಕದ ಅಂತ್ಯದ ವೇಳೆಗೆ ಸಂಪೂರ್ಣ ವಿದ್ಯುತ್ ಚಾಲಿತ ಎಂಜಿನ್‌ನೊಂದಿಗೆ ಲಭ್ಯವಾಗಲಿವೆ. ಲ್ಯಾಂಡ್ ರೋವರ್‌ನ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಎಸ್‌ಯುವಿ 2024ರಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಅದಾದ ನಂತರದ ಐದು ವರ್ಷಗಳಲ್ಲಿ ಲ್ಯಾಂಡ್ ರೋವರ್ ಆರು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ಜೆಎಲ್‌ಆರ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಥಿಯರಿ ಬೊಲೋರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.