ಬೆಂಗಳೂರು: ಕೊರಿಯಾ ಮೂಲದ ಕಾರು ತಯಾರಿಕ ಸಂಸ್ಥೆ ಕಿಯಾ, ದೇಶದ ಮಾರುಕಟ್ಟೆಗೆ ನೂತನ ಎಲೆಕ್ಟ್ರಿಕ್ ಕಾರು ಪರಿಚಯಿಸಿದೆ.
ಕಿಯಾ ಇವಿ6 ಆರ್‌ಡಬ್ಲ್ಯೂಡಿ ಮತ್ತು ಎಡಬ್ಲ್ಯೂಡಿ ಎಂಬ ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಗಿದ್ದು, ಕ್ರಮವಾಗಿ ₹59.95 ಲಕ್ಷ ಮತ್ತು ₹64.95 ಲಕ್ಷ ದರ (ಎಕ್ಸ್. ಶೋ ರೂಮ್) ಹೊಂದಿದೆ.
ಕಿಯಾ ಇವಿ6 ಸಂಪೂರ್ಣ ಆಮದು ಕಾರು ಆಗಿದ್ದು, ಈ ವರ್ಷದಲ್ಲಿ 100 ಕಾರುಗಳನ್ನಷ್ಟೇ ಭಾರತದಲ್ಲಿ ಮಾರಾಟ ಮಾಡುವ ಗುರಿ ಹೊಂದಿದೆ.
12 ನಗರಗಳ 15 ಡೀಲರ್‌ಗಳ ಮೂಲಕ ಕಿಯಾ ಎಲೆಕ್ಟ್ರಿಕ್ ಕಾರು ಮಾರಾಟವಾಗಲಿದೆ.
ಈಗಾಗಲೇ ಹೊಸ ಎಲೆಕ್ಟ್ರಿಕ್ ಕಾರಿಗೆ ಕಿಯಾ, 355 ಬುಕಿಂಗ್ ಪಡೆದುಕೊಂಡಿದೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ಅವುಗಳನ್ನು ಪೂರೈಸಲು ಕಿಯಾ ಕ್ರಮ ಕೈಗೊಳ್ಳಲಿದೆ.
ಸೆಪ್ಟೆಂಬರ್ 2022ರಲ್ಲಿ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಡೆಲಿವರಿ ಆರಂಭವಾಗಲಿದೆ. 77.4kWh ಬ್ಯಾಟರಿ ಪ್ಯಾಕ್ ಮೂಲಕ ಕಿಯಾ ಇವಿ6 ದೇಶದಲ್ಲಿ ಲಭ್ಯವಾಗಲಿದ್ದು, 528 ಕಿ.ಮೀ. ವ್ಯಾಪ್ತಿ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.