ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ತನ್ನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ವಿಟಾರಾ ಬ್ರೆಜಾದ ಹೊಸ ಅವತರಣಿಕೆಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಕಾರಿನ ಆರಂಭಿಕ ಬೆಲೆ ₹7.34 ಲಕ್ಷ ನಿಗದಿಯಾಗಿದೆ.
ಹೊಸ ಮಾದರಿಯ ವಿಟಾರಾ ಬ್ರೆಜಾ ಬಿಎಸ್6 ಗುಣಮಟ್ಟದ 1.5 ಲೀಟರ್ ಕೆ–ಸಿರೀಸ್‌ನ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಸ್ಮಾರ್ಟ್ ಹೈಬ್ರಿಡ್‌ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದೆ. ಬೆಲೆ ₹7.34–11.4 ಲಕ್ಷದವರೆಗೂ ಇದೆ.
ಇದೇ ತಿಂಗಳು 'ಆಟೋ ಎಕ್ಸ್‌ಪೋ 2020' ಕಾರ್ಯಕ್ರಮದಲ್ಲಿ ಹೊಸ ವಿಟಾರಾ ಬ್ರೆಜಾ ಅನಾವರಣಗೊಂಡಿತ್ತು.
ಹಿಂದಿನ ಎಸ್‌ಯುವಿಗಿಂತಲೂ ಅಧಿಕ ಸಾಮರ್ಥ್ಯ ಮತ್ತು ವಿನ್ಯಾಸದಲ್ಲಿ ಬದಲಾವಣೆಯೊಂದಿಗೆ ಬಿಡುಗಡೆಯಾಗಿದೆ. ಏಪ್ರಿಲ್ 1ರಿಂದ ಬಿಎಸ್6 ವಾಯು ಮಾಲಿನ್ಯ ಪರಿಣಾಮ ಅನ್ವಯವಾಗಲಿದ್ದು, ಕಂಪನಿ ಡೀಸೆಲ್ ಎಂಜಿನ್ ಆವೃತ್ತಿ ಹೊರ ತರುವ ಯೋಜನೆ ಕೈಬಿಟ್ಟಿದೆ.
2016ರಲ್ಲಿ ಬಿಡುಗಡೆಯಾಗಿದ್ದ ವಿಟಾರಾ ಬ್ರೆಜಾ, ಎಸ್‌ಯುವಿಗಳ ವಲಯದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮಾರುತಿ ಸುಜುಕಿಗೆ ಸಹಕಾರಿಯಾಯಿತು. ನಾಲ್ಕು ವರ್ಷಗಳಲ್ಲಿ ಸುಮಾರು 5 ಲಕ್ಷ ವಿಟಾರಾ ಬ್ರೆಜಾ ಮಾರಾಟವಾಗಿರುವುದಾಗಿ ಕಂಪನಿ ಹೇಳಿದೆ.
ಹೊಸ ವಿಟಾರಾ ಬ್ರೆಜಾ ವೈಶಿಷ್ಟ್ಯಗಳು
* ಅಧಿಕ ಸಾಮರ್ಥ್ಯದ 1.5 ಲೀಟರ್ ಬಿಎಸ್6 ಪೆಟ್ರೋಲ್ ಎಂಜಿನ್
* 5 ಸ್ಪೀಡ್ ಮ್ಯಾನುವಲ್ ಮತ್ತು ಅಡ್ವಾನ್ಸಡ್ ಆಟೊಮೆಟಿಕ್ ಟ್ರಾನ್ಸ್‌ಮಿಷನ್
* 17.78 ಸೆಂಟಿಮೀಟರ್ ಟಚ್ ಸ್ಕ್ರೀನ್ ಇನ್ಫೊಟೇನ್‌ಮೆಂಟ್
* ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್
* ಪ್ರೀಮಿಯಂ ಇಂಟೀರಿಯರ್ ಮತ್ತು ಬದಲಾದ ಬಾಹ್ಯ ವಿನ್ಯಾಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.