ADVERTISEMENT

ಮಾರುತಿ ಸುಜುಕಿ: ಸ್ಫೋರ್ಟ್ಸ್‌ ಆವೃತ್ತಿಯ ಸಿಯಾಜ್‌ ಕಾರು ಬಿಡುಗಡೆ 

ಪಿಟಿಐ
Published 25 ಜನವರಿ 2020, 9:41 IST
Last Updated 25 ಜನವರಿ 2020, 9:41 IST
ಮಾರುತಿ ಸುಜುಕಿ ಸಿಯಾಜ್‌ ಎಸ್‌
ಮಾರುತಿ ಸುಜುಕಿ ಸಿಯಾಜ್‌ ಎಸ್‌    
""

ನವದೆಹಲಿ: ದೇಶದ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಶನಿವಾರ ಹೊಸ 'ಸಿಯಾಜ್‌ ಎಸ್‌' ಬಿಡುಗಡೆ ಮಾಡಿದೆ. ಸ್ಫೋರ್ಟ್ಸ್‌ ಆವೃತ್ತಿಯ ಸೆಡಾನ್‌ ಕಾರು ಇದಾಗಿದೆ.

ಅನಾವರಣಗೊಂಡಿರುವ 'ಸಿಯಾಜ್‌–ಎಸ್‌' ಕಾರಿಗೆ ₹ 10.08 ಲಕ್ಷ ನಿಗದಿಯಾಗಿದೆ. ಬಿಎಸ್‌–6 ಗುಣಮಟ್ಟದ ಸಿಯಾಜ್‌ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಸಿಯಾಜ್‌ ಬಿಎಸ್–6 ಕಾರುಗಳ ಬೆಲೆ ₹ 8.31 ಲಕ್ಷದಿಂದ ₹ 11.09 ಲಕ್ಷ ನಿಗದಿಯಾಗಿದೆ. ಏಪ್ರಿಲ್‌ 1ರಿಂದ ಬಿಎಸ್‌–6 ವಾಯು ಮಾಲಿನ್ಯಪರಿಮಾಣ ಜಾರಿಯಾಗಲಿದೆ.

ಎಂಜಿನ್‌ ಸಾಮರ್ಥ್ಯ, ಸೆಳೆಯುವ ಹೊರ ವಿನ್ಯಾಸ ಹಾಗೂ ಕಾರಿನ ಒಳಗಿನ ಪ್ರೀಮಿಯಂ ವಿನ್ಯಾಸಗಳಿಂದ ಜನಪ್ರಿಯಗೊಂಡಿರುವಸಿಯಾಜ್‌ ಶೇ 29ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಈವರೆಗೂ 2.7 ಲಕ್ಷ ಕಾರುಗಳು ಮಾರಾಟಗೊಂಡಿವೆ.

ADVERTISEMENT

ಬಿಡುಗಡೆಯಾಗಿರುವ ಸ್ಫೋರ್ಟ್‌ ಆವೃತ್ತಿಯ ಸಿಯಾಜ್‌ ಕಾರಿಗೆ ಹಿಂಬದಿಯಲ್ಲಿ ಅಳವಡಿಸಲಾಗಿರುವ ಸ್ಪಾಯ್ಲರ್‌ ಗಮನ ಸೆಳೆಯುತ್ತಿದೆ. ಮುಂಬದಿಯಲ್ಲಿ ಫಾಗ್‌ ಲ್ಯಾಂಪ್‌, ಮಲ್ಟಿ ಸ್ಪೋಕ್‌ ಹೊಂದಿರುವ 16 ಇಂಚಿನ ಅಲಾಯ್‌ ವೀಲ್ಸ್‌ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.