ಬೆಂಗಳೂರು: ನಿಸಾನ್ ಮೋಟರ್ ಇಂಡಿಯಾ ಕಂಪನಿ ತನ್ನ ಬಹುನಿರೀಕ್ಷಿತ ನಿಸಾನ್ ಮ್ಯಾಗ್ನೈಟ್ ಬಿಡುಗಡೆ ಮಾಡುವ ಮೂಲಕ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವನ್ನು ಪ್ರವೇಶಿಸಿದೆ.
ಪರಿಚಯಾತ್ಮಕ ಬೆಲೆ ₹ 4.99 ಲಕ್ಷ (ಎಕ್ಸ್ ಷೋರೂಂ) ನಿಗದಿಪಡಿಸಿದೆ. ಈ ಬೆಲೆಯು ಡಿಸೆಂಬರ್ 31ರವರೆಗೆ ಅನ್ವಯಿಸಲಿದೆ. ದೇಶದಾದ್ಯಂತ ಇರುವ ನಿಸಾನ್ ಡೀಲರ್‌ಶಿಪ್‌ಗಳಲ್ಲಿ ಹಾಗೂ ತನ್ನ ಜಾಲತಾಣದಲ್ಲಿ ಬುಧವಾರದಿಂದಲೇ ಬುಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ
‘ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ನಿಸಾನ್ ನೆಕ್ಸ್ಟ್ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಪರಿಕಲ್ಪನೆಯಲ್ಲಿ ತಯಾರಿಸಲಾಗಿರುವ ಈ ಎಸ್‌ಯುವಿ 20 ಕ್ಕೂ ಹೆಚ್ಚು ಪ್ರಥಮ ದರ್ಜೆ ಮತ್ತು ಅತ್ಯುತ್ತಮ ಶ್ರೇಣಿಯ ವೈಶಿಷ್ಟ್ಯತೆಗಳನ್ನು ಹೊಂದಿದೆ’ ಎಂದು ನಿಸಾನ್ ಮೋಟರ್ ಇಂಡಿಯಾದ ಅಧ್ಯಕ್ಷ ಸಿನಾನ್ ಒಝ್ಕೊಕ್ ತಿಳಿಸಿದರು.
‘ನಿಸಾನ್ ಮ್ಯಾಗ್ನೈಟ್ ತನ್ನ ಅತ್ಯುನ್ನತವಾದ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗುವ ವಿಶ್ವಾಸ ನಮ್ಮದಾಗಿದೆ’ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದರು.
ಒಂದು ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯ ಬೆಲೆ ₹ 4.99 ಲಕ್ಷದಿಂದ ₹ 7.55 ಲಕ್ಷದವರೆಗಿದೆ. ಟರ್ಬೊ ಪೆಟ್ರೋಲ್ ಟ್ರಿಮ್ ಆಯ್ಕೆ ಇರುವುದರ ಬೆಲೆ ₹ 6.99 ಲಕ್ಷದಿಂದ ₹ 8.45 ಲಕ್ಷ ಇದೆ. ಟರ್ಬೊ ಪೆಟ್ರೋಲ್ ಸಿವಿಟಿ ಮಾದರಿಯ ಬೆಲೆ ₹ 7.89 ಲಕ್ಷದಿಂದ ₹ 9.35 ಲಕ್ಷದವರೆಗಿದೆ. ಎಲ್ಲಾ ಬೆಲೆಗಳೂ ಎಕ್ಸ್ ಷೋರೂಂನದ್ದಾಗಿವೆ ಎಂದು ಕಂಪನಿ ತಿಳಿಸಿದೆ.
ವೈಶಿಷ್ಟ್ಯ: 60–40 ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್ಸ್, 336 ಲೀಟರ್ ಲಗೇಜ್ ಸ್ಪೇಸ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, 8 ಇಂಚು ಇನ್ಫೊಟೇನ್ಮೆಂಟ್ ಡಿಸ್‌ಪ್ಲೇ ಹಾಗೂ 50ಕ್ಕೂ ಅಧಿಕ ಕನೆಕ್ಟೆಡ್ ಫೀಚರ್ಸ್‌ಗಳನ್ನು ಈ ಕಾರು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.