ಬೆಂಗಳೂರು: ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಒಬೆನ್ ಎಲೆಕ್ಟ್ರಿಕ್ ತನ್ನ ಮೊದಲ ಇ.ವಿ. ದ್ವಿಚಕ್ರ ವಾಹನ ‘ರೋರ್’ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ.
ಈ ಬೈಕ್‌ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಆನ್‌ಲೈನ್ ಮೂಲಕ ಇದನ್ನು ಪ್ರೀಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
ಈ ಬೈಕ್ ನಿಲುಗಡೆಯ ಸ್ಥಿತಿಯಿಂದ ಗಂಟೆಗೆ 40 ಕಿ.ಮೀ. ವೇಗವನ್ನು ಕೇವಲ ಮೂರು ಸೆಕೆಂಡ್‌ಗಳಲ್ಲಿ ತಲುಪಬಲ್ಲದು. ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಇದನ್ನು ಚಲಾಯಿಸಬಹುದು. ಬ್ಯಾಟರಿಯನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿಕೊಂಡರೆ 200 ಕಿ.ಮೀ. ದೂರ ಕ್ರಮಿಸಲು ಅಡ್ಡಿಯಿಲ್ಲ ಎಂದೂ ಕಂಪನಿಯು ಹೇಳಿದೆ.
ರೋರ್ ಬೈಕ್ ಈಗ ಮೂರು ಬಣ್ಣಗಳಲ್ಲಿ ಲಭ್ಯವಿದೆ. ₹ 999 ಪಾವತಿಸಿ ಪ್ರೀಬುಕ್ ಮಾಡಬಹುದು. ಇದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಘಟಕದಲ್ಲಿ ತಯಾರಾಗಲಿದೆ. ಆರಂಭದಲ್ಲಿ ಈ ಘಟಕವು ವಾರ್ಷಿಕ ಮೂರು ಲಕ್ಷ ಬೈಕ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.
‘ಮಾರಾಟ ನಂತರದ ಸೇವೆ, ಗ್ರಾಹಕರ ನಿರೀಕ್ಷೆಗಳ ವಿಚಾರದಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳದೆ ನಾವು ಹೊಸ ಮಾರುಕಟ್ಟೆಗಳಿಗೆ ವಿಸ್ತರಣೆ ಕಾಣುತ್ತೇವೆ’ ಎಂದು ಕಂಪನಿಯ ಸಹ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಧುಮಿತಾ ಅಗರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.