ನವದೆಹಲಿ: ಓಲಾ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್ ಬುಕಿಂಗ್ ಸೇವೆ ಆರಂಭಿಸಿದ್ದು 24 ಗಂಟೆಗಳಲ್ಲಿ 1 ಲಕ್ಷ ಗ್ರಾಹಕರು ಬುಕಿಂಗ್ ಮಾಡಿದ್ದಾರೆ.
ಗುರುವಾರ (ಜುಲೈ 15)ದಿಂದ ಬುಕ್ಕಿಂಗ್ ಆರಂಭವಾಗಿತ್ತು. ಗ್ರಾಹಕರಿಗೆ ಓಲಾ ವೆಬ್‌ಸೈಟ್ ಹಾಗೂ ಆ್ಯಪ್ ಮೂಲಕ ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ. ಮರುಪಾವತಿಸಬಹುದಾದ ₹ 499 ಠೇವಣಿ ಇರಿಸಿ ಈ ಸ್ಕೂಟರ್ ಕಾಯ್ದಿರಿಸಬಹುದು ಎಂದು ಓಲಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿತ್ತು.
ಕಂಪನಿಯು ವಿದ್ಯುತ್ ಚಾಲಿತ ಸ್ಕೂಟರ್‌ನ ವೈಶಿಷ್ಟ್ಯಗಳ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಇದು ಗರಿಷ್ಠ ವೇಗ, ಅತಿ ಹೆಚ್ಚಿನ ಬೂಟ್ ಸ್ಪೇಸ್ ಮತ್ತು ಆಧುನಿಕ ತಂತ್ರಜ್ಞಾನ ಒಳಗೊಂಡಿರಲಿದೆ ಎಂದು ಹೇಳಿದೆ.
ಎಲ್ಲರಿಗೂ ಸುಲಭವಾಗಿ ದೊರೆಯುವ ರೀತಿಯಲ್ಲಿ ಇದರ ಬೆಲೆ ಇರಲಿದ್ದು, ಆಗಸ್ಟ್ ತಿಂಗಳಲ್ಲಿ ಇ–ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ.
ಅಕ್ಟೋಬರ್ ಅಂತ್ಯಕ್ಕೆ 30 ಸಾವಿರ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.