ಬೆಂಗಳೂರು: ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ‘ಹಂಟರ್ 350’ ಬೈಕ್ ಅನ್ನು ರಾಜ್ಯದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,49,900 (ಕರ್ನಾಟಕ ಎಕ್ಸ್ ಷೋರೂಂ) ದಿಂದ ಆರಂಭ ಆಗುತ್ತದೆ.
ರಾಜ್ಯದಲ್ಲಿ ಬೆಳೆಯುತ್ತಿರುವ ಮೋಟಾರ್ ಸೈಕ್ಲಿಂಗ್ ಸಮೂಹ ಮತ್ತು ಯುವ ಸಮೂಹಕ್ಕೆ ಹೊಂದುವಂತೆ ಇದನ್ನು ರೂಪಿಸಲಾಗಿದೆ.ರೆಟ್ರೊ ಹಂಟರ್ ಮತ್ತು ಮೆಟ್ರೊ ಹಂಟರ್ ಎಂಬ ಎರಡು ಆವೃತ್ತಿಗಳಲ್ಲಿ ರಾಜ್ಯದ 100ಕ್ಕೂ ಅಧಿಕ ಟಚ್ ಪಾಯಿಂಟ್‌ಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
350ಸಿಸಿ ಜೆ–ಸರಣಿಯ ಪ್ಲಾಟ್‌ಫಾರಂನಲ್ಲಿ ಇದು ನಿರ್ಮಾಣಗೊಂಡಿದ್ದು, ಅತ್ಯಂತ ಚುರುಕಿನ ಹ್ಯಾರಿಸ್ ಪರ್ಫಾರ್ಮೆನ್ಸ್ ಚಾಸಿಸ್ ಹೊಂದಿದೆ. ನಗರದ ಮತ್ತು ಸಬ್ ಅರ್ಬನ್ ರಸ್ತೆಗಳಲ್ಲಿಯೂ ಚಲಾಯಿಸಬಹುದು ಎಂದು ಕಂಪನಿಯ ಸಿಇಒ ಜಿ. ಗೋವಿಂದರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುಭವಿ ಮತ್ತು ಹೊಸ ರೈಡರ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಮೋಟರ್‌ಸೈಕ್ಲಿಂಗ್ ಇಷ್ಟಪಡುವ ರಾಜ್ಯದ ಹೊಸ ಗ್ರಾಹಕರನ್ನು ಸೆಳೆಯುವ ವಿಶ್ವಾಸ ಇದೆ ಎಂದು ಕಂಪನಿಯ ಭಾರತದ ವಹಿವಾಟಿನ ಮುಖ್ಯಸ್ಥ ವಿ. ಜಯಪ್ರದೀಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.