ಬೆಂಗಳೂರು: ಆಕರ್ಷಕ ವಿನ್ಯಾಸ ಹೊಂದಿರುವ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಬೈಕ್ ಅನ್ನು ಅನಾವರಣ ಮಾಡಲಾಗಿದೆ.
ಡಿಜಿಟಲ್ ಗ್ರಾಫಿಕ್ಸ್ ಸಹಿತ ನೂತನ ಪರಿಕಲ್ಪನೆಯ ರಾಯಲ್ಎನ್‌ಫೀಲ್ಡ್ ಎಸ್‌ಜಿ650ಯನ್ನು ಇಐಸಿಎಂಎ 2021 ಮೋಟಾರ್ ಶೋದಲ್ಲಿ ಪರಿಚಯಿಸಲಾಗಿದೆ.
ಭವಿಷ್ಯದ ವಿನ್ಯಾಸ ಎಂಬ ಪರಿಕಲ್ಪನೆಯೊಂದಿಗೆ ರಾಯಲ್ ಎನ್‌ಫೀಲ್ಡ್ ನೂತನ ಎಸ್‌ಜಿ650 ಬಿಡುಗಡೆ ಮಾಡಲಿದೆ.
ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಮೋಟಾರ್ ಬೈಕ್‌ನಲ್ಲಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯಲ್ಲಿ ಬಳಸಲಾಗಿರುವ ಎಂಜಿನ್ ಅನ್ನೇ ಬಳಸಲಾಗಿದೆ.
ಎಸ್‌ಜಿ650 ಮೋಟಾರ್ ಬೈಕ್‌ನಲ್ಲಿ ಹೊಸ ಮಾದರಿಯ ಹೆಡ್‌ಲೈಟ್, ಡಿಸ್ಕ್ ಬ್ರೇಕ್ ಅನ್ನು ಪರಿಚಯಿಸಲಾಗಿದೆ. ಉಳಿದಂತೆ ಹೆಚ್ಚಿನ ವಿವರವನ್ನು ಕಂಪನಿ ಬಿಡುಗಡೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.