ADVERTISEMENT

ಟಾಟಾ ಟಿಯಾಗೊ ಎಲೆಕ್ಟ್ರಿಕ್‌: ಬುಕಿಂಗ್ ಮಾಡಲು ಗ್ರಾಹಕರ ನೂಕುನುಗ್ಗಲು

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಆವೃತ್ತಿಗೆ ಭಾರಿ ಬೇಡಿಕೆ

ಪಿಟಿಐ
Published 11 ಅಕ್ಟೋಬರ್ 2022, 10:38 IST
Last Updated 11 ಅಕ್ಟೋಬರ್ 2022, 10:38 IST
ಟಾಟಾ ಟಿಯಾಗೊ ಎಲೆಕ್ಟ್ರಿಕ್ ಆವೃತ್ತಿ
ಟಾಟಾ ಟಿಯಾಗೊ ಎಲೆಕ್ಟ್ರಿಕ್ ಆವೃತ್ತಿ   

ನವದೆಹಲಿ: ಟಾಟಾ ಮೋಟಾರ್ಸ್ ಇತ್ತೀಚೆಗೆ ಪರಿಚಯಿಸಿರುವ ಟಿಯಾಗೊ ಎಲೆಕ್ಟ್ರಿಕ್ ಆವೃತ್ತಿ ಹ್ಯಾಚ್‌ಬ್ಯಾಕ್ ಕಾರು ಬುಕಿಂಗ್‌ಗೆ ಜನರು ಹೆಚ್ಚಿನ ಆಸಕ್ತಿ ತೋರಿದ್ದಾರೆ.

ಟಿಯಾಗೊ ಎಲೆಕ್ಟ್ರಿಕ್ ಆವೃತ್ತಿ ಬುಕಿಂಗ್‌ಗೆ ಜನರಿಂದ ಭಾರಿ ಪ್ರತಿಕ್ರಿಯೆ ಕಂಡುಬಂದಿದ್ದು, ಅದರ ಪರಿಣಾಮ ವೆಬ್‌ಸೈಟ್‌ನಲ್ಲಿ ಕೆಲಕಾಲ ತಾಂತ್ರಿಕ ದೋಷ ಕಂಡುಬಂದಿದೆ.

ಆನ್‌ಲೈನ್ ಮೂಲಕ ಟಿಯಾಗೊ ಎಲೆಕ್ಟ್ರಿಕ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನರು ದೇಶದಾದ್ಯಂತ ಟಿಯಾಗೊ ಕಾರನ್ನು ಆನ್‌ಲೈನ್ ಮೂಲಕ ಬುಕಿಂಗ್ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ವೆಬ್‌ಸೈಟ್ ಕ್ರ್ಯಾಶ್ ಆಗಿದೆ ಎಂದು ವರದಿಯಾಗಿದೆ.

ADVERTISEMENT

ಈ ಕುರಿತು ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ವಿಭಾಗದ ಆಡಳಿತ ನಿರ್ದೇಶಕ ಶೈಲೇಶ್ ಚಂದ್ರ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಆನ್‌ಲೈನ್ ಮತ್ತು ಡೀಲರ್ ಮೂಲಕ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಆನ್‌ಲೈನ್‌ನಲ್ಲಿ ಹೆಚ್ಚಿನ ಜನರು ಬುಕಿಂಗ್‌ ಆಸಕ್ತಿ ತೋರಿದ್ದು, ವೆಬ್‌ಸೈಟ್ ಕ್ಷಣಕಾಲ ಸ್ಥಗಿತವಾಗಿತ್ತು. ಸಮಸ್ಯೆಯನ್ನು ಸರಿಪಡಿಸಿದ್ದೇವೆ, ಗ್ರಾಹಕರಿಗೆ ಉಂಟಾಗಿದ್ದ ಅಡಚಣೆಗೆ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.

ಸೆ. 28ರಂದು ಟಾಟಾ ನೂತನ ಟಿಯಾಗೊ ಎಲೆಕ್ಟ್ರಿಕ್ ಪರಿಚಯಿಸಿದೆ. ಮೊದಲ 10,000 ಗ್ರಾಹಕರಿಗೆ ₹8.49 ಲಕ್ಷದಿಂದ ₹11.79 ಲಕ್ಷದವರೆಗಿನ ಬೆಲೆಯಲ್ಲಿ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.