ನವದೆಹಲಿ: ಟಾಟಾ ಮೋಟಾರ್ಸ್ ಕಂಪನಿಯು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಟಾಟಾ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೈಲೇಶ್ ಚಂದ್ರ ಅವರು, ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (ಪೆಟ್ರೋಲ್ ಮತ್ತು ಡೀಸೆಲ್) ಮತ್ತು ನೆಕ್ಸಾನ್.ಇವಿ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.
‘ನೆಕ್ಸಾನ್ ಫೇಸ್‌ಲಿಫ್ಟ್ ವಾಹನಗಳಿಗೆ ಹೊಸ ರೂಪ, ನವೀಕರಣದ ನೀಡಲಾಗಿದೆ. ಇದರ ಎಕ್ಸ್‌ಷೋರೂಂ ಬೆಲೆ ₹8.10 ಲಕ್ಷದಿಂದ ಆರಂಭವಾಗುತ್ತದೆ’ ಎಂದು ತಿಳಿಸಿದರು.
‘ಇದರ ಡ್ಯಾಶ್‌ಬೋರ್ಡ್‌ನಲ್ಲಿ 10.5 ಇಂಚಿನ ಪರದೆಯ ಮಲ್ಟಿಮೀಡಿಯಾ ಸಿಸ್ಟಂ ಅಳವಡಿಸಲಾಗಿದೆ. ಆ್ಯಂಡ್ರಾಯ್ಡ್ ಆಟೊ, ಆ್ಯಪಲ್ ಕಾರ್‌ಪ್ಲೇ ವ್ಯವಸ್ಥೆಗಳಿವೆ. ನ್ಯಾವಿಗೇಷನ್, ಕಾಲ್ ಮೆಸೇಜ್ ನಿರ್ವಹಣೆ ಉತ್ತಮವಾಗಿದೆ. ಟರ್ನ್ ಇಂಡಿಕೇಟರ್ ಕ್ಯಾಮೆರಾ ಮತ್ತು 360 ಡಿಗ್ರಿ ಕ್ಯಾಮೆರಾಗಳ ಡಿಸ್ ಪ್ಲೇ ಆಗಿಯೂ ಇದು ಕೆಲಸ ಮಾಡಲಿದೆ. ಜತೆಗೆ 6 ಏರ್‌ಬ್ಯಾಗ್‌ಗಳು, ಪಾರ್ಕಿಂಗ್ ಸೆನ್ಸರ್ ಸೇರಿದಂತೆ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ’ ಎಂದು ತಿಳಿಸಿದರು.
ಹಳೆಯ ನೆಕ್ಸಾನ್ ಇ.ವಿ.ಗಿಂತ ಹೊಸ ನೆಕ್ಸಾನ್.ಇವಿ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದು ಸಂಪೂರ್ಣ ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗವನ್ನು ಹೊಂದಿದೆ.
‘ಟಾಟಾ ನೆಕ್ಸಾನ್.ಇವಿ ಫೇಸ್‌ಲಿಫ್ಟ್‌ನ ಮಧ್ಯಮ ಶ್ರೇಣಿಯ ಮಾದರಿಯು ಒಂದು ಬಾರಿ ಚಾರ್ಜ್ ಮಾಡಿದರೆ 325 ಕಿ.ಮೀ ಕ್ರಮಿಸುತ್ತದೆ. ನೆಕ್ಸಾನ್.ಇವಿ ಲಾಂಗ್‌ರೇಂಜ್ ಮಾದರಿಯು 465 ಕಿ.ಮೀವರೆಗೆ ಸಾಗಲಿದೆ’ ಎಂದು ತಿಳಿಸಿದರು.
(ಕಂಪನಿಯ ಆಹ್ವಾನದ ಮೇರೆಗೆ ಪ್ರತಿನಿಧಿ ನವದೆಹಲಿಗೆ ತೆರಳಿದ್ದರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.