ದುಬೈ: ಮಿಲೆನಿಯಲ್‌ಗಳು ಹಾಗೂ ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗುರಿಯಾಗಿಸಿಕೊಂಡು ಟಿವಿಎಸ್ ಮೋಟರ್ ಕಂಪನಿಯು ಹೊಸ ವಿದ್ಯುತ್ ಚಾಲಿತ (ಇ.ವಿ) ದ್ವಿಚಕ್ರ ವಾಹನ ‘ಟಿವಿಎಸ್ ಎಕ್ಸ್’ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ವಾಹನದ ಪರಿಚಯಾತ್ಮಕ ಬೆಲೆ ₹2.5 ಲಕ್ಷ. ನಿಲುಗಡೆಯ ಸ್ಥಿತಿಯಿಂದ ಗಂಟೆಗೆ 40 ಕಿ.ಮೀ. ವೇಗವನ್ನು ಇದು 2.6 ಸೆಕೆಂಡ್‌ಗಳಲ್ಲಿ ತಲುಪಬಲ್ಲದು. ಇದು ಗಂಟೆಗೆ ಗರಿಷ್ಠ 105 ಕಿ.ಮೀ. ವೇಗದಲ್ಲಿ ಸಾಗಬಲ್ಲದು.
ಬ್ಯಾಟರಿಯನ್ನು ಟಿವಿಎಸ್ ಕಂಪನಿಯು ತಾನೇ ಅಭಿವೃದ್ಧಿಪಡಿಸಿದ್ದು, ಸುರಕ್ಷಿತವಾಗಿದೆ ಹಾಗೂ ಹೆಚ್ಚು ಅವಧಿಗೆ ಬಾಳಿಕೆ ಬರುವಂತಿದೆ ಎಂದು ತಿಳಿಸಿದೆ.
ಕಂಪನಿಯ ವೆಬ್‌ಸೈಟ್ ಮೂಲಕ ಈ ವಾಹನ ಬುಕ್ ಮಾಡಬಹುದು. ನವೆಂಬರ್‌ನಿಂದ ಇದನ್ನು ಗ್ರಾಹಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಶುರುವಾಗಲಿದೆ. ಈ ವಾಹನಕ್ಕೆ ಫೇಮ್ ಯೋಜನೆಯ ಅಡಿಯಲ್ಲಿ ಯಾವುದೇ ಸಬ್ಸಿಡಿ ಸಿಗುವುದಿಲ್ಲ.
1981ರಿಂದ 1996ರ ನಡುವೆ ಜನಿಸಿದವರನ್ನು ಮಿಲೆನಿಯಲ್‌ಗಳು ಎಂದು, 1996ರ ನಂತರ ಜನಿಸಿದವರನ್ನು ಜೆನ್ ಜೆಡ್ ಎಂದು ಗುರುತಿಸಲಾಗುತ್ತಿದೆ. ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲು ಕಂಪನಿಯು ₹250 ಕೋಟಿ ಹೂಡಿಕೆ ಮಾಡಿದೆ.
ಈ ವಾಹನವನ್ನು ಬಾಂಗ್ಲಾದೇಶ, ನೇಪಾಳ, ಯುರೋಪ್, ಲ್ಯಾಟಿನ್ ಅಮೆರಿಕಕ್ಕೆ ರಫ್ತು ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.