ADVERTISEMENT

ಟಾಟಾ ಮೋಟರ್ಸ್‌ನಿಂದ JNVಗಳಲ್ಲಿ ಆಟೊ ಲ್ಯಾಬ್‌: ಸಿಎಸ್‌ಆರ್ ಅಡಿ ಹೊಸ ಹೆಜ್ಜೆ

ಟಾಟಾ ಮೋಟರ್ಸ್, ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ತೆರೆಯುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2024, 11:12 IST
Last Updated 15 ಜುಲೈ 2024, 11:12 IST
<div class="paragraphs"><p>ಟಾಟಾ&nbsp;ಮೋಟಾರ್ಸ್‌</p></div>

ಟಾಟಾ ಮೋಟಾರ್ಸ್‌

   

ಮುಂಬೈ: ವಿದ್ಯಾರ್ಥಿಗಳಿಗೆ ವಾಹನ ಉದ್ಯಮದ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿಸಲು ಮತ್ತು ಆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್, ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ತೆರೆಯುತ್ತಿದೆ.

ನವೋದಯ ವಿದ್ಯಾಲಯಗಳ ಸಮಿತಿ ಸಹಭಾಗಿತ್ವದೊಡನೆ ಟಾಟಾ ಮೋಟರ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿ ಈ ಹೆಜ್ಜೆ ಇಟ್ಟಿದೆ.

ADVERTISEMENT

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ‍್ರದೇಶ ಹಾಗೂ ಉತ್ತರಾಖಂಡದ ಆಯ್ದ ನವೋದಯ ಶಾಲೆಗಳಲ್ಲಿ ಈ ಆಟೊ ಲ್ಯಾಬ್‌ಗಳನ್ನು ತೆರೆಯಲಾಗುತ್ತಿದೆ ಎಂದು ಕಂಪನಿ ಸೋಮವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

‘ಸದ್ಯ 25 ಶಾಲೆಗಳಲ್ಲಿ ಸುಸಜ್ಜಿತ ಆಟೊ ಲ್ಯಾಬ್‌ಗಳನ್ನು ನಿರ್ಮಿಸಲಾಗಿದೆ. ಇನ್ನೂ ಹೆಚ್ಚಿಸಲಾಗುವುದು’ ಎಂದು ಟಾಟಾ ಮೋಟರ್ಸ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ವಿನೋದ್ ಕುಲಕರ್ಣಿ ತಿಳಿಸಿದ್ದಾರೆ.

ಭಾರತದ ಆಟೊಮೊಬೈಲ್ ಕ್ಷೇತ್ರಕ್ಕೆ ಪ್ರತಿಭಾವಂತ ಯುವಕರನ್ನು ಸೆಳೆಯುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿದೆ. ಸೆಕೆಂಡೆರಿ ಹಾಗೂ ಹೈಯರ್ ಸೆಕೆಂಡೆರಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಆಟೊ ಲ್ಯಾಬ್ ಸೌಲಭ್ಯ ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ. ಆಟೊ ಲ್ಯಾಬ್‌ನಲ್ಲಿನ ಶಿಕ್ಷಣ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ನವೋದಯ ವಿದ್ಯಾಲಯಗಳ ಸಮಿತಿ ಹಾಗೂ ಟಾಟಾ ಜಂಟಿಯಾಗಿ ಪ್ರಮಾಣಪತ್ರ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ಟಾಟಾ ಮೋಟರ್ಸ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಬೇರೆ ಕಡೆಗೆ ಆಟೊಮೊಬೈಲ್ ಡಿಪ್ಲೊಮಾ ಓದಲು ನೇರವಾಗಿ ಸೇರಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.