ADVERTISEMENT

ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2022, 11:23 IST
Last Updated 15 ನವೆಂಬರ್ 2022, 11:23 IST
ವಿಡಾ
ವಿಡಾ    

ಬೆಂಗಳೂರು: ಪ್ರತಿಷ್ಠಿತ ಹೀರೊ ಮೋಟೊಕಾರ್ಪ್‌ ಕಂಪನಿ ತನ್ನ ಎಲೆಕ್ಟ್ರಿಕ್‌ ವಾಹನಗಳಿಗಾಗಿ ದೇಶದಲ್ಲೇ ಮೊದಲ ಅನುಭವ ಕೇಂದ್ರವನ್ನು ತೆರೆದಿದೆ.

ಎಲ್ಲೆಡೆ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಜನರು, ಪೆಟ್ರೋಲ್‌, ಡೀಸೆಲ್‌ ವಾಹನಗಳಿಂದ ದೂರ ಉಳಿಯುತ್ತಿದ್ದು, ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹೀರೊ ಮೋಟೊಕಾರ್ಪ್‌ ಇತ್ತೀಚೆಗೆ ವಿಡಾ ವಿ1 ಪ್ಲಸ್‌ ಮತ್ತು ವಿ1ಪ್ರೋ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ವಾಹನಗಳ ಖರೀದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಈ ಸ್ಕೂಟರ್‌ಗಳನ್ನು ಒಮ್ಮೆ ಟ್ರೈಯಲ್‌ ರೈಡ್‌ ಮಾಡಲು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಕಂಪನಿಯು ಮೊದಲ ಅನುಭವ ಕೇಂದ್ರವನ್ನು ಬೆಂಗಳೂರಿನ ವಿಠ್ಠಲ್‌ ಮಲ್ಯ ರಸ್ತೆಯಲ್ಲಿ ಅನುಭವ ಕೇಂದ್ರವನ್ನು ತೆರೆದಿದೆ. ಇಲ್ಲಿ ವಾಹನಗಳ ಟ್ರಯಲ್‌ ಮಾಡಬಹುದು.

ADVERTISEMENT

ಈಗಾಗಲೇ ವಿಡಾ ವಾಹನಗಳ ಬುಕ್ಕಿಂಗ್‌ ತೆರೆದಿದ್ದು, ವಾಹನಗಳ ವಿತರಣೆ ಡಿಸೆಂಬರ್‌ ತಿಂಗಳ ಎರಡನೇ ವಾರದಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ವಿಡಾ ಅನುಭವ ಕೇಂದ್ರದಲ್ಲಿ ಇಲ್ಲಿ ವಿಡಾ ವಿ1 ವಾಹನವನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಾಗೂ ಇವಿ ಚಾರ್ಜಿಂಗ್‌ಗೆ ಉತ್ತಮ ಸ್ಥಳಾವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನವದೆಹಲಿ, ಜೈಪುರದಲ್ಲೂ ಅನುಭವ ಕೇಂದ್ರ ತೆರೆಯಲು ಕಂಪನಿ ಯೋಜಿಸಿದೆ.

ಬೆಂಗಳೂರಿನಲ್ಲಿ ಕಂಪನಿಯು ಮೊದಲ ಅನುಭವ ಕೇಂದ್ರವನ್ನು ತೆರೆದಿದ್ದು, ಗ್ರಾಹಕರು ಈ ವಾಹನದ ಅನುಭವ ಪಡೆಯಲು ನೇರವಾಗಿ ಸಂಪರ್ಕ ಮಾಡಬಹುದು ಎಂದು ಹೀರೊ ಮೋಟರ್‌ ಮೊಬಿಲಿಟಿ ಬ್ಯುಸಿನೆಸ್‌ ಮುಖ್ಯಸ್ಥ ಸ್ವದೇಶ್‌ ಶ್ರೀವಾಸ್ತವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.