ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಆ್ಯಪಲ್, ಎಲೆಕ್ಟ್ರಿಕ್ ಕಾರು ಪರಿಚಯಿಸಲು ಮುಂದಾಗಿದೆ.
2025ರ ವೇಳೆಗೆ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡ ನೂತನ ಆ್ಯಪಲ್ ಕಾರು ಸಿದ್ಧವಾಗಲಿದೆ.
ಆ್ಯಪಲ್ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಮುಂದಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಕಂಪನಿಯ ಷೇರುಗಳು ಕೂಡ ಏರಿಕೆ ಕಂಡಿದೆ.
ಪ್ರಾಜೆಕ್ಟ್ ಟೈಟಾನ್ ಹೆಸರಿನ ಯೋಜನೆ ಮೂಲಕ ಆ್ಯಪಲ್ ಹೊಸ ಕಾರು ಪರಿಚಯಿಸುವ ಸಾಧ್ಯತೆಯಿದೆ.
ಪರಿಸರ ಕಾಳಜಿ ಮತ್ತು ಮಿತವ್ಯಯದ ಇಂಧನ ಬಳಕೆ ಕುರಿತು ಹೆಚ್ಚಿನ ಆದ್ಯತೆ ವಹಿಸಿ ಎಲೆಕ್ಟ್ರಿಕ್ ಕಾರು ತಯಾರಾಗಲಿದೆ.
ಆದರೆ ಹೊಸ ಯೋಜನೆ ಮತ್ತು ಕಾರಿನ ಬಗ್ಗೆ ವಿವರ ನೀಡಲು ಆ್ಯಪಲ್ ನಿರಾಕರಿಸಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.