ADVERTISEMENT

ಇ.ವಿ. ತಯಾರಿಕೆಗೆ ಪತ್ಯೇಕ ಘಟಕ: ಅಶೋಕ್‌ ಲೇಲ್ಯಾಂಡ್ ಚಿಂತನೆ

ಪಿಟಿಐ
Published 20 ಫೆಬ್ರುವರಿ 2022, 13:07 IST
Last Updated 20 ಫೆಬ್ರುವರಿ 2022, 13:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಪ್ರತ್ಯೇಕ ಘಟಕ ಸ್ಥಾಪಿಸುವ ಆಲೋಚನೆ ನಡೆಸಿರುವುದಾಗಿ ಅಶೋಕ್‌ ಲೇಲ್ಯಾಂಡ್ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಧೀರಜ್‌ ಹಿಂದುಜಾ ತಿಳಿಸಿದ್ದಾರೆ.

‘ಶೀಘ್ರದಲ್ಲೇ ನಮಗೆ ಸ್ವತಂತ್ರ ಘಟಕದ ಅಗತ್ಯ ಬೀಳಲಿದೆ. ಈ ಬಗ್ಗೆ ನಿರ್ವಹಣಾ ತಂಡವು ಗಮನ ಹರಿಸಲಿದೆ’ ಎಂದು ಹೇಳಿದ್ದಾರೆ. ಹೊಸ ಘಟಕ ಸ್ಥಾಪನೆಗೆ ಕಾಲಮಿತಿ ಹಾಕಿಕೊಳ್ಳಲಾಗಿದೆಯೇ ಎನ್ನುವ ಪ್ರಶ್ನೆಗೆ, ‘ಬಹಳಷ್ಟು ಅಂಶಗಳು ವಿದ್ಯುತ್ ಚಾಲಿತ ವಾಹನಗಳ ಬೆಳವಣಿಗೆ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ’ ಎಂದು ತಿಳಿಸಿದ್ದಾರೆ.

ವಾಣಿಜ್ಯ ವಾಹನಗಳಿಗೆ ಸಿಎನ್‌ಜಿ, ಹೈಡ್ರೋಜನ್‌ನಂತಹ ಪರ್ಯಾಯ ಇಂಧನಗಳ ಎಂಜಿನ್‌ ಅಭಿವೃದ್ಧಿಪಡಿಸಲು ₹ 500 ಕೋಟಿ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ.

ADVERTISEMENT

ವಿದ್ಯತ್ ಚಾಲಿತ ವಾಹನಗಳ ಅಭಿವೃದ್ಧಿಗಾಗಿ ತನ್ನ ಅಂಗಸಂಸ್ಥೆ ಸ್ಚಿಚ್ ಮೊಬಿಲಿಟಿ ಮೂಲಕ ₹ 1,500 ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಈಗಾಗಲೇ ಘೋಷಿಸಿದೆ. ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು ಕಂಪನಿ ಗಮನ ಹರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.