ADVERTISEMENT

ಫೆಬ್ರುವರಿಯಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 23ರಷ್ಟು ಇಳಿಕೆ

ಸೆಮಿಕಂಡಕ್ಟರ್‌ ಕೊರತೆ, ವಾಹನಗಳ ಬೆಲೆ ಹೆಚ್ಚಳ ಪರಿಣಾಮ

ಪಿಟಿಐ
Published 11 ಮಾರ್ಚ್ 2022, 11:30 IST
Last Updated 11 ಮಾರ್ಚ್ 2022, 11:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೆಮಿಕಂಡಕ್ಟರ್‌ ಚಿಪ್‌ ಕೊರತೆ ಮತ್ತು ವಾಹನಗಳ ಬೆಲೆ ಏರಿಕೆಯ ಕಾರಣಗಳಿಂದಾಗಿ 2021ರ ಫೆಬ್ರುವರಿಗೆ ಹೋಲಿಸಿದರೆ 2022ರ ಫೆಬ್ರುವರಿಯಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಶೇಕಡ 23ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

2021ರ ಫೆಬ್ರುವರಿಯಲ್ಲಿ 17.35 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಫೆಬ್ರುವರಿಯಲ್ಲಿ 13.28 ಲಕ್ಷ ವಾಹನಗಳು ಮಾರಾಟ ಆಗಿವೆ.

‘ಸೆಮಿಕಂಡಕ್ಟರ್‌ ಕೊರತೆ, ತಯಾರಿಕಾ ವೆಚ್ಚ ಹೆಚ್ಚಳ, ಸರಕುಗಳ ಬೆಲೆ ಏರಿಕೆ ಮತ್ತು ಸಾಗಣೆ ವೆಚ್ಚ ಗರಿಷ್ಠ ಮಟ್ಟದಲ್ಲಿ ಇರುವುದು... ಹೀಗೆ ಹಲವು ಕಾರಣಗಳಿಂದಾಗಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಮೆನನ್‌ ಹೇಳಿದ್ದಾರೆ.

ADVERTISEMENT

ಮಾರಾಟದ ವಿವರ (ಲಕ್ಷಗಳಲ್ಲಿ)

ಮಾದರಿ;2021 ಫೆಬ್ರುವರಿ;2022 ಫೆಬ್ರುವರಿ

ಪ್ರಯಾಣಿಕ ವಾಹನ; 2.81; 2.62

ಪ್ರಯಾಣಿಕ ಕಾರು;1.55; 1.33;

ಯುಟಿಲಿಟಿ ವಾಹನ;1.14; 1.20

ದ್ವಿಚಕ್ರ ವಾಹನ;14.26; 10.37

ತ್ರಿಚಕ್ರ; 27,656; 27,039*

(* ತ್ರಿಚಕ್ರ ವಾಹನಗಳ ಅಂಕಿ–ಅಂಶವು ಸಾವಿರದ ಲೆಕ್ಕದಲ್ಲಿ ಇದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.