ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಬಜಾಜ್ ಆಟೊ, ಪಲ್ಸರ್ ಎನ್‌ಎಸ್ ಸರಣಿಯ ಮೋಟಾರ್‌ಸೈಕಲ್‌ಗಳನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಿದೆ.
ನವೀಕೃತ ಎನ್‌ಎಸ್200 ಹಾಗೂ ಎನ್‌ಎಸ್160 ಬೈಕ್‌ಗಳು ಹಳೆಯ ಮಾದರಿಗಳಿಗೆ ಹೋಲಿಸಿದರೆ ಸಾಕಷ್ಟು ಅಪ್‌ಗ್ರೇಡ್ ಆಗಿವೆ. ಇವುಗಳಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಇಂಡಿಕೇಟರ್‌ಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್‌ಫೋನ್ ಜೋಡಣೆಗಾಗಿ ಬ್ಲೂಟೂತ್ ಸಂಪರ್ಕಕ್ಕೂ ಅವಕಾಶ ಕಲ್ಪಿಸಲಾಗಿದೆ. ಬೈಕ್‌ನ ಡಿಸ್‌ಪ್ಲೇನಲ್ಲಿಯೇ ಮೊಬೈಲ್ ಸಂದೇಶ ಸ್ವೀಕಾರ, ಕರೆ ಅನುಮತಿಸಲು ಹಾಗೂ ನಿರಾಕರಣೆಗೆ ಅವಕಾಶವಿದೆ.
ಎನ್‌ಎಸ್125 ಬೈಕ್ ಕೂಡ ಹೊಸ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಹೊಂದಿದೆ.
ಈ ಬೈಕ್‌ಗಳು ಸವಾರರು ನಿರೀಕ್ಷಿಸುವ ಸಾಮರ್ಥ್ಯ ಹೊಂದಿವೆ. ಹೊಸ ವೈಶಿಷ್ಟ್ಯ ಒಳಗೊಂಡಿದ್ದು, ಉತ್ತಮ ಸವಾರಿಯ ಅನುಭವವನ್ನು ನೀಡುತ್ತವೆ. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನವೀಕರಿಸಲಾಗಿದೆ. ನವೀನ ತಂತ್ರಜ್ಞಾನದ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಎನ್‌ಎಸ್200 ಬೈಕ್‌ನ ಎಕ್ಸ್ ಷೋರೂಂ ಬೆಲೆ ₹1,57,427, ಎನ್‌ಎಸ್160 ಬೆಲೆ ₹1,45,792 ಹಾಗೂ ಎನ್‌ಎಸ್125 ಬೆಲೆಯು ₹1,04,922 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.