ಮುಂಬೈ: ದೇಶದ ಪ್ರಮುಖ ಉದ್ಯಮ ಸಂಸ್ಥೆ ಬಜಾಜ್, ಆಟೋ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ. 8ರಷ್ಟು ಏರಿಕೆ ದಾಖಲಿಸಿದೆ.
2021ರ ಆಗಸ್ಟ್ ವೇಳೆಗೆ ವಾರ್ಷಿಕವಾಗಿ 3,73,270 ಆಟೋರಿಕ್ಷಾಗಳನ್ನು ಬಜಾಜ್ ಮಾರಾಟ ಮಾಡಿತ್ತು.
ಅದಾದ ಬಳಿಕ, 2022ರ ಆಗಸ್ಟ್ ಅವಧಿಗೆ 4,01,595 ಆಟೋರಿಕ್ಷಾಗಳನ್ನು ಮಾರಾಟ ಮಾಡಿದ್ದು, ಶೇ. 8ರಷ್ಟು ಪ್ರಗತಿ ದಾಖಲಿಸಿದೆ ಎಂದು ಕಂಪನಿ ಹೇಳಿದೆ.
ಅಲ್ಲದೆ, ಬಜಾಜ್ ದ್ವಿಚಕ್ರ ವಾಹನ ರಫ್ತಿನಲ್ಲಿ ಶೇ. 28ರಷ್ಟು ಕುಸಿತ ಕಂಡಿದೆ. 2021ರಲ್ಲಿ 2,00,675 ದ್ವಿಚಕ್ರ ವಾಹನ ರಫ್ತಾಗಿದ್ದರೆ, 2022ರ ಆಗಸ್ಟ್ ಅವಧಿಯಲ್ಲಿ 1,44,840 ದ್ವಿಚಕ್ರ ವಾಹನ ರಫ್ತು ಮಾಡಿದೆ.
ದೇಶದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಬಜಾಜ್ ಶೇ. 5ರಷ್ಟು ಪ್ರಗತಿ ದಾಖಲಿಸಿದ್ದು, 2021ರ ಆಗಸ್ಟ್ ವೇಳೆಗೆ ಒಂದು ವರ್ಷದ ಅವಧಿಯಲ್ಲಿ ಶೇ. 3,38,310 ದ್ವಿಚಕ್ರ ವಾಹನ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ವರೆಗೆ 3,55,625 ದ್ವಿಚಕ್ರ ವಾಹನ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.