ADVERTISEMENT

BharatBenzಗೆ ಪ್ರಸಿದ್ಧ ಟ್ರೇಡ್‌ಮಾರ್ಕ್ ಸ್ಥಾನಮಾನ ನೀಡಿದ ಭೌದ್ಧಿಕ ಆಸ್ತಿ ಕಚೇರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2024, 16:04 IST
Last Updated 5 ನವೆಂಬರ್ 2024, 16:04 IST
<div class="paragraphs"><p>ಭಾರತ್‌ಬೆಂಜ್‌</p></div>

ಭಾರತ್‌ಬೆಂಜ್‌

   

ಚೆನ್ನೈ: ಜರ್ಮನಿಯ ಡ್ಯಾಮ್ಲೆರ್‌ ಇಂಡಿಯಾ ವಾಣಿಜ್ಯ ವಾಹನ (DICV) ಕಂಪನಿಯ ಭಾರತ್‌ಬೆಂಜ್‌ ಎಂಬ ಬ್ರಾಂಡ್‌ ಹೆಸರಿಗೆ ಪ್ರಸಿದ್ಧ ಟ್ರೇಡ್‌ಮಾರ್ಕ್‌ ಸ್ಥಾನಮಾನವನ್ನು ಭಾರತೀಯ ಭೌದ್ಧಿಕ ಆಸ್ತಿ ಕಚೇರಿ ನೀಡಿ ಆದೇಶಿಸಿದೆ.

ಈ ವಿಷಯವನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸತ್ಯಾಕಮ್‌ ಆರ್ಯ ಅವರು ತಿಳಿಸಿದ್ದು, ‘ಭಾರತದ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಭಾರತ್‌ಬೆಂಜ್‌ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದೆ. ಇಂಥ ಸಂದರ್ಭದಲ್ಲಿ ಕಂಪನಿಯ ಬ್ರಾಂಡ್‌ ಹೆಸರಿಗೆ ಪ್ರಸಿದ್ಧ ಟ್ರೇಡ್‌ಮಾರ್ಕ್ ಸ್ಥಾನಮಾನ ದೊರಕಿರುವುದು ಹೆಮ್ಮೆಯ ಸಂಗತಿ. ಇದು ನಮ್ಮ ಬ್ರಾಂಡ್‌ ಈವರೆಗಿನ ಯಶಸ್ವಿ ಪಯಣವನ್ನು ಸಾರಿದೆ’ ಎಂದಿದ್ದಾರೆ.

ADVERTISEMENT

’ಕಳೆದ 12 ವರ್ಷಗಳಲ್ಲಿ ಗ್ರಾಹಕರ ವಿಶ್ವಾಸವನ್ನು ಭಾರತ್‌ಬೆಂಜ್‌ ಗೆದ್ದಿದೆ. ಜತೆಗೆ ದೇಶ ನಿರ್ಮಾಣದಲ್ಲೂ ಕಂಪನಿ ಗಣನೀಯ ಕೊಡುಗೆ ನೀಡಿದೆ. ತಮ್ಮ ಬದ್ಧತೆ ಹಾಗೂ ಗುಣಮಟ್ಟದ ಆಧಾರದಲ್ಲಿ ಮಾರುಕಟ್ಟೆಯಲ್ಲೂ ಉತ್ತಮ ಹಿಡಿತವನ್ನು ಕಂಪನಿ ಹೊಂದಿದೆ. ಕಂಪನಿಯು ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಭಾರತ್‌ಬೆಂಜ್‌ ಪಾಲಿಸಿಕೊಂಡು ಬಂದಿದೆ. ಚಾಲನಾ ಅನುಭೂತಿಯೊಂದಿಗೆ ಭಾರತದಲ್ಲಿನ ವಾಣಿಜ್ಯ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಶೆಖೆಯನ್ನು ಆರಂಭಿಸಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.