ADVERTISEMENT

BMW Recalls: 7 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯಲಿರುವ ಬಿಎಂಡಬ್ಲ್ಯೂ

ಏಜೆನ್ಸೀಸ್
Published 20 ಆಗಸ್ಟ್ 2024, 15:25 IST
Last Updated 20 ಆಗಸ್ಟ್ 2024, 15:25 IST
   

ವಾಷಿಂಗ್ಟನ್‌: ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಅವಘಡ ಉಂಟಾಗುವ ಸಾಧ್ಯತೆಯಿರುವುದರಿಂದ ಬಿಎಂಡಬ್ಲ್ಯೂ ಕಂಪನಿ ತಾನು ಮಾರಾಟ ಮಾಡಿದ 7 ಲಕ್ಷಕ್ಕೂ ಅಧಿಕ ಕಾರುಗಳನ್ನು ಹಿಂಪಡೆಯಲಿದೆ.

ಎಕ್ಸ್ 1, ಎಕ್ಸ್ 3 ಮತ್ತು ಎಕ್ಸ್ 5 ಸೇರಿದಂತೆ ಇತರ ಮಾದರಿಯ ಕಾರುಗಳನ್ನು ಹಿಂಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ವಿಭಾಗವು(ಎನ್‌ಎಚ್‌ಟಿಎಸ್‌ಎ) ಸೂಚನೆ ನೀಡಿದೆ. 

‘ಕಾರಿನಲ್ಲಿರುವ ನೀರಿನ ಪಂಪ್‌ ಅನ್ನು ಸರಿಯಾಗಿ ಮುಚ್ಚಲಾಗಿಲ್ಲ. ಇದರಿಂದಾಗಿ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿದೆ’ ಎಂದು ಎನ್‌ಎಚ್‌ಟಿಎಸ್‌ಎ ವರದಿ ಸಲ್ಲಿಸಿತ್ತು.

ADVERTISEMENT

7 ಲಕ್ಷದ 20 ಸಾವಿರಕ್ಕೂ ಅಧಿಕ ವಾಹನಗಳ ಮಾಲೀಕರಿಗೆ ಈ ಬಗ್ಗೆ ಅಕ್ಟೋಬರ್‌ನಲ್ಲಿ ಕಂಪನಿಯು ಮಾಹಿತಿ ನೀಡುವ ಸಾಧ್ಯತೆಗಳಿದ್ದು, ಬಿಎಂಡಬ್ಲ್ಯೂ ಶೋರೂಮ್‌ಗಳಲ್ಲಿ ಉಚಿತವಾಗಿ ರಿಪೇರಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.