ಬರ್ಲಿನ್: ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಉತ್ತಮವಾಗುತ್ತಿದ್ದರೂ 2025ರವರೆಗೆ ವಾಹನಗಳ ಬಿಡಿಭಾಗಗಳಲ್ಲಿ ತೀರಾ ಅಗತ್ಯವಿರುವ ಕೆಲ ಚಿಪ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯಲಿದೆ. ಹೀಗಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟ ಶೇ 5ರಿಂದ 7ರಷ್ಟು ಹೆಚ್ಚಳವಾಗಿದೆ ಎಂದು ಜರ್ಮನಿಯ ವಾಹನ ಕ್ಷೇತ್ರದ ಪರಿಣಿತರು ಹೇಳಿದ್ದಾರೆ.
ಹಿಂದಿನ ವರ್ಷ ಕಾರುಗಳ ಮಾರಾಟ ದರ ಶೇ 3ರಿಂದ 5ರ ದರದಲ್ಲಿತ್ತು. ಕಳೆದ ವರ್ಷ ಲಘು ಮೋಟಾರು ವಾಹನಗಳ ಮಾರಾಟ ಶೇ 1ರಿಂದ 3ರಷ್ಟಿತ್ತು. 2ನೇ ತ್ರೈಮಾಸಿಕದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳವಾಗಿತ್ತು. ಇದರಿಂದಾಗಿ ಕಾರುಗಳ ಬೆಲೆಯಲ್ಲೂ ಏರಿಕೆಯಾಗುವ ಸುಳಿವನ್ನು ಪರಿಣಿತರು ನೀಡಿದ್ದಾರೆ.
‘ದರ ಹೆಚ್ಚಳ ಕುರಿತು ಗ್ರಾಹಕರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು. ಆದರೂ ಬೆಲೆ ಏರಿಕೆ ಅನಿವಾರ್ಯವಾಗಲಿದೆ’ ಎಂದು ಕಾಂಟಿನೆಂಟಲ್‌ನ ಮುಖ್ಯ ಹಣಕಾಸು ಅಧಿಕಾರಿ ಕಾಟಿಯಾ ಗಾರ್ಸಿಯಾ ವಿಲಾ ಹೇಳಿದ್ದಾರೆ.
‘ಸ್ವಯಂ ಚಾಲಿತ ಕಾರುಗಳ ಉತ್ಪಾದನೆ, ಸಂವಹನಕ್ಕೆ ನೀಡುತ್ತಿರುವ ಹೆಚ್ಚಿನ ಗಮನದಿಂದಾಗಿ ನಿರ್ದಿಷ್ಟ ಸ್ವರೂಪದ ಚಿಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇಂಥ ಚಿಪ್‌ಗಳ ಪೂರೈಕೆ ಸರಾಗವಾಗಲು 2025ರವರೆಗೂ ಕಾಯಲೇಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.