ADVERTISEMENT

ವಾಹನ ಬಿಡಿಭಾಗಗಳ ದೇಶಿ ಉತ್ಪಾದನೆಗೆ ಗಮನ

ಪಿಟಿಐ
Published 15 ಜನವರಿ 2023, 12:43 IST
Last Updated 15 ಜನವರಿ 2023, 12:43 IST
   

ನವದೆಹಲಿ (ಪಿಟಿಐ): ದೇಶಿ ಆಟೊಮೊಬೈಲ್ ಉದ್ಯಮವು ಭಾರತದಲ್ಲಿಯೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಯನ್ನು ಹೆಚ್ಚಿಸುವ ಯತ್ನಕ್ಕೆ ಇನ್ನಷ್ಟು ಬಲ ನೀಡಿದೆ. ವಿದೇಶಗಳ ಮೇಲಿನ, ಅದರಲ್ಲೂ ಮುಖ್ಯವಾಗಿ ಚೀನಾ ಮೇಲಿನ, ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶ.

ಆಟೊಮೊಟಿವ್‌ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) ಅಧ್ಯಕ್ಷ ಸಂಜಯ್ ಕ‍ಪೂರ್ ಅವರು ಈ ವಿಷಯ ತಿಳಿಸಿದ್ದಾರೆ. ಭಾರತೀಯ ಆಟೊಮೊಬೈಲ್ ತಯಾರಕರ ಸಂಘ, ಕೇಂದ್ರ ಬೃಹತ್ ಉದ್ದಿಮೆಗಳ ಸಚಿವಾಲಯ ಹಾಗೂ ಎಸಿಎಂಎ ಜೊತೆಯಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ವಿದ್ಯುತ್ ಚಾಲಿತ ವಾಹನಗಳ ಬಳಕೆಯ ಉತ್ತೇಜನಕ್ಕೆ ಹೆಚ್ಚಿನ ಪ್ರಯತ್ನಗಳು ನಡೆಯುತ್ತಿರುವ ಕಾರಣ, ಆಟೊಮೊಬೈಲ್ ಬಿಡಿಭಾಗಗಳ ಉದ್ದಿಮೆಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.