ADVERTISEMENT

ದ್ವಿಚಕ್ರ ವಾಹನ ಮಾರಾಟ ಶೇ 4ರಷ್ಟು ಇಳಿಕೆ ಸಾಧ್ಯತೆ: ಐಸಿಆರ್‌ಎ

ಪಿಟಿಐ
Published 22 ನವೆಂಬರ್ 2021, 14:10 IST
Last Updated 22 ನವೆಂಬರ್ 2021, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬೆಲೆ ಏರಿಕೆ ಮತ್ತು ಪೆಟ್ರೋಲ್‌ ದರಹೆಚ್ಚಿನ ಮಟ್ಟದಲ್ಲಿ ಇರುವ ಕಾರಣಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಶೇಕಡ 1ರಿಂದ ಶೇ 4ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ದೇಶಿ ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಹೇಳಿದೆ.

ಹಬ್ಬದ ಋತುವಿನಲ್ಲಿ ಮಾರಾಟ ಕಡಿಮೆ ಆಗಿರುವುದು ಸಹ ಒಟ್ಟಾರೆಯಾಗಿ ದ್ವಿಚಕ್ರ ವಾಹನ ಮಾರಾಟದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಪಾಲು ಹೊಂದಿರುವ 75 ಸಿಸಿಯಿಂದ 110 ಸಿಸಿವರೆಗಿನ ವಾಹನಗಳ ಮಾರಾಟವು ಈ ವರ್ಷ ಮಂದಗತಿಯಲ್ಲಿ ಇದೆ. ಕೋವಿಡ್‌ನ ಎರಡನೇ ಅಲೆಯ ಪರಿಣಾಮವಾಗಿ ಕಡಿಮೆ ಆದಾಯ ಇರುವ ಜನ ಹೆಚ್ಚಿನ ಮೊತ್ತದ ಖರೀದಿಗಳಿಂದ ಹಿಂದೆ ಸರಿಯುವಂತೆ ಆಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ರೋಹನ್‌ ಕಣ್ವರ್ ಗುಪ್ತಾ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.