ಬೆಂಗಳೂರು: ಪರಿಸರ ಮಾಲಿನ್ಯ ತಡೆ ಯುವ ಪ್ರಯತ್ನಕ್ಕೆ‘ಬೌನ್ಸ್’ಮತ್ತೊಂದು ನವೋದ್ಯಮದ ಮೂಲಕ ಹೊಸ ಹೆಜ್ಜೆ ಇರಿಸಿದೆ. ಸುಸ್ಥಿರ ಸಂಚಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಕಂಪನಿ,ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳನ್ನು ವಿದ್ಯುತ್ (ಎಲೆಕ್ಟ್ರಿಕ್) ವಾಹನಗಳನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೊಂಡಿದೆ.
ಭವಿಷ್ಯವು ಎಲೆಕ್ಟ್ರಿಕ್ ವಾಹನಗಳನ್ನು ಅವಲಂಬಿಸಿರಲಿದೆ ಎಂಬುದರ ಮೇಲೆ ನಂಬಿಕೆ ಇಟ್ಟಿರುವ ಸಂಸ್ಥೆಯು, ಈ ವಾಹನಗಳ ಉತ್ಪಾದನೆಯನ್ನು ಆರಂಭಿಸಿದೆ.‘ಝುಯಿಂಕ್ ರೆಟ್ರೊಫಿಟ್’ಹೆಸರಿನಲ್ಲಿ ‘ಬೌನ್ಸ್’ ಸಮೂಹ ತನ್ನದೇ ಆದ ಅಂಗಸಂಸ್ಥೆಯನ್ನು ಆರಂಭಿಸಿದೆ. ಸಾಂಪ್ರದಾಯಿಕ ಇಂಧನ ಬಳಸುವ ಸ್ಕೂಟರ್‌ಗಳನ್ನು ರೆಟ್ರೊ ಫಿಟ್ (ಎಲೆಕ್ಟ್ರಿಕ್) ಆಗಿ ಪರಿವರ್ತಿಸಬಹುದು.
ಪೆಟ್ರೋಲ್ ದರ ಏರಿಕೆಯಿಂದಾಗಿ ಇಂದು ಅನೇಕರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ‘ಝುಯಿಂಕ್ ರೆಟ್ರೊಫಿಟ್’ವಾಹನ ಸವಾರರಿಗೆ ತನ್ನದೇ ಆದ ಯೋಜನೆಗಳ ಮೂಲಕ ನೆರವು ನೀಡಲು ಮುಂದಾಗಿದೆ. ಹಳೆಯ ದ್ವಿಚಕ್ರ ವಾಹನಗಳನ್ನೇ ವಿದ್ಯುತ್ ವಾಹನಗಳನ್ನಾಗಿ ಪರಿವರ್ತಿಸುತ್ತಿರುವುದು ಈ ನವೋದ್ಯಮದ ವಿಶೇಷ.
‘ಪೆಟ್ರೋಲ್ ವಾಹನಕ್ಕೆ ಕಿಟ್ ಅಳವಡಿಸಲಾಗುತ್ತದೆ. ದ್ವಿಚಕ್ರ ವಾಹನದಲ್ಲಿನ ಎಂಜಿನ್ ತೆಗೆದು ಕಿಟ್ ಮತ್ತು ಹಬ್ ಮೋಟಾರ್ ಅಳವಡಿಸಲಾಗುತ್ತದೆ. ಇದಕ್ಕಾಗಿ ತಗಲುವ ವೆಚ್ಚವನ್ನು ಪ್ರತಿ ತಿಂಗಳು ಹಣಪಾವತಿಸುವ (ಇಎಂಐ)ವ್ಯವಸ್ಥೆಯೂಇದೆ.ಎಲೆಕ್ಟ್ರಿಕ್‌ಗೆ ಪರಿವರ್ತನೆ ಮಾಡುವುದರಿಂದ ಉಳಿತಾಯವೂ ಸಾಧ್ಯ. ದಿನದಲ್ಲಿ ಸರಾಸರಿ 100 ಕಿ.ಮೀ ವಾಹನ ಚಲಾಯಿಸುತ್ತಿರುವ ಗ್ರಾಹಕರಿಗೆ, ಎಲ್ಲ ವೆಚ್ಚವನ್ನೂ ಲೆಕ್ಕ ಹಾಕಿದಾಗ ₹500ಉಳಿತಾಯವಾಗುತ್ತದೆ’ ಎಂದು ಬೌನ್ಸ್‌ಸಹ ಸ್ಥಾಪಕ ವಿವೇಕಾನಂದ ಹಳ್ಳಿಕೆರೆ ತಿಳಿಸಿದರು.
‘ಸದ್ಯಹೊಂಡಾ ಆ್ಯಕ್ಟಿವಾ ಸ್ಕೂಟರ್ ಅನ್ನು ವಿದ್ಯುತ್ ವಾಹನವನ್ನಾಗಿ ಪರಿವರ್ತಿಸಲಾಗುತ್ತಿದೆ. ಒಂದೆರಡು ವಿವಿಧ ಬೈಕ್‌ಗಳ ಮೇಲೆ ಪ್ರಯೋಗ ಮಾಡಲಾಗಿದೆ. ಶೀಘ್ರದಲ್ಲೇ ಇತರ ಎಲ್ಲ ಬೈಕ್‌ಗಳನ್ನು ಪರಿವರ್ತಿಸುವ ಕಾರ್ಯ ಆರಂಭಿಸಲಾಗುವುದು. ಒಮ್ಮೆ ಎಲೆಕ್ಟ್ರಿಕ್ ಮಾದರಿಗೆ ಪರಿವರ್ತನೆಯಾದ ಸ್ಕೂಟರ್ ಅನ್ನು 1 ಲಕ್ಷ ಕಿ.ಮೀ ಓಡಿಸಬಹುದು’ಎಂದು ವಿವರಿಸಿದರು.
‘ಕಡಿಮೆ ಬೆಲೆಯಲ್ಲಿ ವಾಹನ ಗಳನ್ನು ಎಲೆಕ್ಟ್ರಿಕಲ್‌ಗೆ ಪರಿವರ್ತಿಸಲಾಗುತ್ತಿದೆ. ಉದಾಹರಣೆಗೆ,ಏಳು ವರ್ಷದ ಸ್ಕೂಟರ್ ಮಾರಾಟ ಮಾಡಿ,ಹೊಸ ದ್ವಿಚಕ್ರ ವಾಹನ ಖರೀದಿಸುವುದಕ್ಕೆ₹70ಸಾವಿರದಿಂದ₹1ಲಕ್ಷವಾಗಬಹುದು. ಆದರೆ,ಇಲ್ಲಿಪ್ರತಿ ತಿಂಗಳು₹899ಪಾವತಿಸುವಮೂಲಕಹಳೆಯವಾಹನವನ್ನು ಎಲೆಕ್ಟ್ರಿಕಲ್‌ಗೆ ಪರಿವರ್ತಿಸಬಹುದು’ಎಂದು ಝುಯಿಂಕ್ ರೆಟ್ರೋಫಿಟ್‌ನ ಉಪಾಧ್ಯಕ್ಷ ಸಚಿನ್ ಶೆಣೈ ವಿವರಿಸಿದರು.
‘ಎಲೆಕ್ಟ್ರಿಕ್ ಮಾದರಿಗೆ ಪರಿವರ್ತನೆ ಹೊಂದಿರುವ ಸ್ಕೂಟರ್‌ನಲ್ಲಿ ರಿವರ್ಸ್ ಮೋಡ್ ಸೌಲಭ್ಯ ಇದೆ. ವಾಹನವನ್ನು ಹಿಂದೆ ತಳ್ಳುವುದಕ್ಕೆ ಇದು ಪ್ರಯೋಜನಕಾರಿ’ ಎಂದು ತಿಳಿಸಿದರು.
‘ಪೆಟ್ರೋಲ್ ಬಳಸಿ ಚಲಾಯಿಸುವ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಮಾದರಿಗೆ ಪರಿವರ್ತಿಸಿದಾಗ,ತಿಂಗಳ ಇಂಧನದ ವೆಚ್ಚ ಶೇಕಡ 50ಕ್ಕಿಂತಲೂ ಕಡಿಮೆಯಾಗುತ್ತದೆ. ಪೆಟ್ರೋಲ್‌ಗಾಗಿ ಗ್ರಾಹಕರು ಪ್ರತಿ ಕಿಲೋ ಮೀಟರ್‌ಗೆ ಸರಾಸರಿ₹3ರಿಂದ 3.5 ವೆಚ್ಚ ಮಾಡುತ್ತಾರೆ. ಇದನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಿದರೆ₹1.5 ತಗಲುತ್ತದೆ’ಎಂದು ವಿವರಿಸಿದರು.
ಮಾಹಿತಿಗೆwww.zuink.in/retrofit,+91 89519 71198 ಸಂಪರ್ಕಿಸಬಹುದು.
ಇಂಗಾಲ ಸೂಸುವಿಕೆ ಕಡಿಮೆ
‘ಆರೇಳು ವರ್ಷದ ಹೊಂಡಾ ಆ್ಯಕ್ಟಿವಾ ಅಥವಾ ಟಿವಿಎಸ್ ಸ್ಕೂಟಿ ಇದ್ದರೆ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಿದರೆ ಕಾರ್ಬನ್ ಹೊರಸೂಸುವಿಕೆಯೂ ಕಡಿಮೆಯಾಗುತ್ತದೆ. ಇದರಿಂದ, ವಾಯು ಮಾಲಿನ್ಯವನ್ನೂ ನಿಯಂತ್ರಿಸಿದಂತಾಗುತ್ತದೆ. ಪರಿವರ್ತನೆಯ ಸಂದರ್ಭದಲ್ಲಿ ಸ್ಕೂಟರ್ ಎಂಜಿನ್,ಇಂಧನ ಟ್ಯಾಂಕ್ ಮತ್ತು ಸೈಲೆನ್ಸರ್ ಅನ್ನು ತೆಗೆದು ಅವುಗಳ ಬದಲಿಗೆ ಎಲೆಕ್ಟ್ರಿಕ್ ಪವರ್‌ಟ್ರೈನ್ ಅಳವಡಿಸಲಾಗುತ್ತದೆ. ಜತೆಗೆ,ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು ಈ ಪ್ರಯತ್ನ ಕೈಗೊಳ್ಳಲಾಗಿದೆ’ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.